ಮಾತೆಂಬ ಮುತ್ತಿನ ಹನಿ
ಮಾತೆಂಬುದು ನಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿಕೊಳ್ಳಲು ನಮಗೆ ದೊರೆತಿರುವ ದೈವದತ್ತ ವರ. ಪ್ರಾಣಿಗಳಿಂದ ಮನುಷ್ಯರನ್ನು ಪ್ರಥ್ಯೇಕರಿಸುವ ಪ್ರಮುಖ ಲಕ್ಷಣಗಳಲ್ಲಿ ಇದು ಪ್ರಮುಖವಾದೂದು.ಮಾತು ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುದು ಅಸಾಧ್ಯ .ನಮ್ಮ ದೈನoದಿನ ಹೆಚ್ಚಿನ ಚಟುವಟಿಕೆ ಗಳು ಮಾತಿನ ಮೂಲಕವೇ ನಡೆದು ಹೋಗುತ್ತದೆ .ಮಾತನಾಡುವ ವನಿಗೆ ನಿರ್ದಿಷ್ಟ ವಿಷಯಬೇಕಾಗಿಲ್ಲ.ಮಾತನಾಡುವ ಕೌಶಲ್ಯ ವಿದ್ದರೆ ಸಾಕು.ಆತ ಜಗತ್ತನ್ನೇ ಗೆದ್ದಂತೆ .ಅದರಲ್ಲೂ ಮಾತಿನಲ್ಲಿ ಹೆಚ್ಚು ನಿಪುನರಾದವರೆಂದರೆ ಹೆಂಗಸರು.ಮಾತಿನಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ .ಅವರಿಗೆ ಮಾತನಾಡಲು ವಿಷಯಗಳೇ ಬೇಕಾಗಿಲ್ಲ. ದೈನಂದಿನ ಚಟುವಟಿಕೆಗಳೇ ಅವರ ಮಾತಿನ ವಸ್ತುವಾಗಿರುತ್ತದೆ. 'ಮಾತು ಆಡಿದರೆ ಹೋಯ್ತು ,ಮುತ್ತು ಒಡೆದರೆ ಹೋಯ್ತು 'ಎಂಬ ಗಾದೆ ಮಾತಿನಂತೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು .ಮಾತಿನಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯವೂ ಇದೆ. ಮಾತನಾಡುವ ಸ್ವಾತಂತ್ರ್ಯ ವಿದೆಯೆಂದು ಬೇಕಾದಂತೆ ಮಾತನಾಡಿದರೆ ಅನಾಹುತಕ್ಕೆ ದಾರಿಯಾಗಬಹುದು .ಮಾತು ನಮ್ಮ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ .ಹಾಗಾಗಿ ಮಾತನಾಡುವಾಗ ಯಾರೊಂದಿಗೆ ಎಲ್ಲಿ .ಹೇಗೆ ಮಾತನಾಡಬೇಕು ಎಂಬ ವಿವೇಕ ವಿದ್ದರೆ ಉತ್ತಮ. ಒಮ್ಮೆ ಆಡಿದ ಮಾತನ್ನು ಮತ್ತೊಮ್ಮೆ ಸರಿಪಡಿಸಲು ಸಾಧ್ಯ.ಆಮೇಲೆ ಪಶ್ಚಯತಾಪ ಪಡುವ ಬದಲು ಮೊದಲೇ ಯೋಚಿಸಿ ಮಾತನಾಡುದು ಒಳಿತು .
ಇಂದಿನ ತಂತ್ರಜ್ಞ ನ ಯುಗದಲ್ಲಿ ಮನುಷ್ಯ ಮೊಬೈಲ್ ,ಕಂಪ್ಯೂಟರ್ ,ಪೇಸ್ ಬುಕ್ ,ಮುಂತಾದ ಮಾಯಾಜಾಲಕ್ಕೆ ಸಿಲುಕಿ ಅದೆಷ್ಟೋ ಸಂಬಂದ ಗಳಿಂದ ದೂರವಾಗಿ ಮೂಕನಂತೆ ಬದುಕಿದ್ದಾನೆ .ಇದೆ ರೀತಿ ಮುಂದುವರಿದರೆ ಮುಂದೊಂದು ದಿನ ಮಾತು ಕಲಿಸುವ ತರಬೇತಿ ಕೇಂದ್ರ ಗಳನ್ನೂ ತೆರೆಯಬೇಕಾದಿತು. ಹಾಗಾಗಿ ನಾವೆಲ್ಲ ಮಾತಿನ ಮೌಲ್ಯವನರಿತು ಹಿತಮಿತ ಮಾತಿನೊಂದಿಗೆ ಜೀವಿಸೋಣ ..

No comments:
Post a Comment