Friday, 17 July 2020
ದುಬೈಯ ಗ್ಲೋಬಲ್ ವಿಲೇಜ್ !
ಯು.ಎ.ಇ(ಅರಬ್ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ,ಮರಳುಗಾಡಿಗೆ ಪ್ರಸಿದ್ದಿ ಪಡೆದಿರುವುದು ಎಷ್ಟು ಸತ್ಯವೋ, ಅಷ್ಟೇ ಪ್ರವಾಸೋದ್ಯಮಕ್ಕೂ ಜಗ್ತ್ಪ್ರಸಿದ್ದವಾಗಿದೆ.,. ಈ ದೇಶವನ್ನು ಭೂಮಿ ಮೇಲಿನ ಸ್ವರ್ಗ ಎಂದೂ ಕರೆಯಲಾಗುತ್ತದೆ ಪ್ರಸಿದ್ಢ ತಾಣಗಳ ನಡುವೆ ಪ್ರವಾಸಿಗರನ್ನು ತನ್ನತ್ತಾ ಸೆಳೆಯಲು ಕ್ರತಕವಾಗಿಯೂ,ಒಂದಷ್ಟು ಯೋಜನೆ, ಯೋಚನೆ ಇಲ್ಲಿನ ಸರ್ಕಾರ ಬಗಲಿನಲ್ಲಿ ಇಟ್ಟು ಕೊಂಡಿದೆ ಅಂದರೂ ತಪ್ಪಲ್ಲ .,ಅದರಲ್ಲಿ ಒಂದು ಅಗಾಧವಾದ ಸ್ರಷ್ಠಿ ಸೋಜಿಗಕ್ಕೆ ಉದಾಹರಣೆ "ಗ್ಲೊಬಲ್ ವಿಲೇಜ್ "ಎಂಬ ಕಾನ್ಸೆಪ್ಟ್.!
ಪ್ರಪಂಚದ ಎಲ್ಲಾ ದೇಶಗಳ ಸಂಸ್ಕ್ರತಿ ,ವೈವಿದ್ಯತೆಯನ್ನು ಒಂದೇ ಸೂರಿನಲ್ಲಿ ಸವೆಯಲು ಸೂಕ್ತವಾದ ವೇದಿಕೆ ಈ "ಗ್ಲೊಬಲ್ ವಿಲೇಜ್ "!ಸುಮಾರು ೯೦ಕ್ಕೂ ಅಧಿಕ ದೇಶಗಳಿಗೆ ಒಂದೇ ರಾತ್ರಿಯಲ್ಲಿ ಹೋಗಿ ಬಂದಂತ ಅನುಭವ ಆಗಬಹುದು. ಉದಾಹರಣೆಗೆ ಭಾರತ ಎಂದ ಕೂಡಲೇ ಇಲ್ಲಿನ ತಾಜ್ ಮಹಾಲ್,ಮುಂಬೈ ಗೇಟ್.ಕೋಟೆ ಕೊತ್ತಲುಗಳ ಬ್ರಹತ್ ಸ್ಟ್ಯಾಚುಗಳು. ಅದರ ಒಳಹೊಕ್ಕರೇ,ಸಂಸ್ಕ್ರತಿ ,ಸಂಪ್ರದಾಯಗಳ ಅನಾವರಣವಾಗುತ್ತದೆ.ಸಂಗೀತ ಸಂಜೆ ಕೈಬೀಸಿ ಕರೆಯುತ್ತದೆ,ಕಲರ್ ಫುಲ್ ನೀರಿನ ಕಾರಂಜಿ ಮನಸೆಳೆಯುತ್ತದೆ,ಬಾನ ಮೇಲೆ ತರ-ತರಹ ಬಣ್ಣಗಳೊಂದಿಗೆ ಆಟವಾಡುತ್ತಾ ಮೈನವಿರೇಳಿಸುವ ಪಟಾಕಿಯ ಪ್ರಭಾವನ್ನು ಈ ಹಿಂದೆ ಎಲ್ಲೂ ಕಂಡರಿಯಲು ಸಾಧ್ಯವಿಲ್ಲ. ,ಆ ಸಾಂಸ್ಕ್ರತಿಕ ಕಾರ್ಯಕ್ರವನ್ನು ನೋಡುತ್ತಿದ್ದರೇ ಎಲ್ಲೂ ಕಳೆದು ಹೋಗಿ ಬಿಡುತ್ತೇವೆ.ಶುಚಿ ರುಚಿಯಾದ ಆಹಾರ ಮೇಳದಲ್ಲಿ ನಾಲಿಗೆ ಆಹಾ!! ಅನ್ನದೇ ಇರದು. ಮನಕ್ಕೆ ಮುದನೀಡುವ ಕ್ರೀಡೆಗಳು, ಇರುಳು-ಬೆಳಕಿನಲ್ಲಿ ಟೈಮ್ ಪಾಸು ಆಗಿದ್ದೇ ಗೊತ್ತಾಗೊಲ್ಲ, ಪ್ಯಾಮಿಲಿ ಜೊತೆಗೆ ಶಾಪಿಂಗ್ ಗೆ ಹೇಳಿಮಾಡಿಸಿದ ಜಾಗ , ಎಂಟರ್ಟೈಮೆಂಟ್ ಜೊತೆಗೆ ಅಗತ್ಯದಿಂದ,ಅಪೂರುಪದ ವಸ್ತುಗಳ ಭಂಡಾರ ಇಲ್ಲಿ ಗಮನಸೆಳೆಯುತ್ತದೆ. ಪ್ರತಿಯೊಂದು ಆಯಾಯ ದೇಶದ ಸಾಮಾಗ್ರಿಗಳು ಕೈಗೆಟಕುತ್ತದೆ. ಜಗತ್ತಿನ ಪ್ರಸಿದ್ದ ಸರ್ಕಸ್ ಆಟ ಒಂದೇ ಎರಡೇ ಎಲ್ಲವೂ ಒಂದೇ ಟೇಕ್ ನಲ್ಲಿ ಅನುಭವಿಸಲು ಗ್ಲೋಬಲ್ ವಿಲೇಜ್ ಬರಲೇ ಬೇಕು .
ದೂರದಿಲ್ಲಿದ್ದರೂ ನಮ್ಮ ದೇಶದಲ್ಲಿನ ಯಾವುದೋ ಜಾತ್ರೆನೋ,ವಾರ್ಷಿಕ ಮೇಳಕ್ಕೆ ಬಂದೆವೆನೋ ಎಂಬಂತೆ ಭಾಸವಾಗುತ್ತದೆ, ಇನ್ನಷ್ಟು ಆತುರ-ಕಾತುರವನ್ನು ಕಾಯ್ದು ಕೊಳ್ಳುತ್ತದೆ ,ಹೊಸ ಉತ್ಸಾಹ ,ಉಲ್ಲಾಸ, ಹುಮ್ಮಸ್ಸು,ಅದಮ್ಯ ಒಲವುನ್ನು ತಂದು ಕೊಡುತ್ತದೆ ಒಮ್ಮೆ ಒಳ ಹೊಕ್ಕರೆ ಹೊರಬರಲು ಮನಸ್ಸು ಬಾರದು, ಅದೇನೋ ಕಳೇದು ಕೊಂಡೇವು ಎಂಬತೆ ಭಾರವಾಗುತ್ತದೆ . ಇನ್ನು ಒಂದಷ್ಟು ಸಮಯ ಅಲ್ಲೇ ಇರಬೇಕು ಎಂಬ ಭಾವನೆ ಮೈದಳೆಯುತ್ತದೆ . ಈ ಎಲ್ಲಾವನ್ನು ಒಂದೇ ವೇದಿಕೆಯಲ್ಲಿ ಉಣಬಡಿಸುವ ಗ್ಲೊಬಲ್ ವಿಲೇಜ್ ,ಎಂಬ ಅತೀ ಹೆಚ್ಚು ಜನಸಾಗರವನ್ನು ತನ್ನ ತೆಕ್ಕೆಗೆ ಒಲಿಸಿಕೊಳ್ಳುವ ಈ ಕಾರ್ಯಕ್ರಮ ಸಿಗುವುದು ವರ್ಷದಲ್ಲಿ ಒಮ್ಮೆ ಮಾತ್ರ, ಸಮ್ಮರ್ ಸೀಜನ್ ನ ಆರು ತಿಂಗಳುಗಳಲ್ಲಿ.ಅಂದ ಹಾಗೆ ಇದು ಆರಂಭವಾಗಿದ್ದು ೧೯೯೭ ರಲ್ಲಿ .ದುಬೈನ ಶೇಕ್ ಮಹಮ್ಮದ್ ಬಿನ್ ಝಾಯದ್ ಎಂಬ ಬ್ರಹತ್ ಮೈದಾನದಲ್ಲಿ ನಡೆಯುತ್ತದೆ. ಆರು ತಿಂಗಳುಗಳ ಕಾಲ ನಡೆಯುವ ಇದು ಶನಿವಾರ ದಿಂದ ಬುಧವಾರದ ಸಂಜೆ ೪ ಗಂಟೆ ಯಿಂದ ಮಧ್ಯೆ ರಾತ್ರಿ ೧೨ ಗಂಟೆ ತನಕ ಸಮಯ ನಿಗದಿಯಾದರೇ ಇನ್ನುಳಿದ ಗುರುವಾರ ಮತ್ತು ಶುಕ್ರವಾರ ಸಂಜೆ ೪ ಗಂಟೆ ಯಿಂದ ಮುಂಜಾನೆ ೧ ಗಂಟೆ ತನಕ ಸಮಯ ವಿರುತ್ತದೆ. ಪ್ರತಿ ಸೋಮವಾರ ವಿಶೇಷವಾಗಿ ಮಹಿಳೇಯರಿಗೆ ಮತ್ತು ಪ್ಯಾಮಿಲಿದಾರರಿಗೆ ಡೆಡಿಕೇಶನ್ ಮಾಡಲಾಗುತ್ತದೆ. ಇದಕ್ಕೆ ಪ್ರವೇಶ ಶುಲ್ಕ ೧೫ ದಿರಮ್ ಆಗಿರುತ್ತದೆ. ಈ ಬಾರಿ ಅಕ್ಟೋಬರ್ ೨೦೨೦ ರಿಂದ ಎಪ್ರಿಲ್ ೨೦೨೧ರವರೆಗೆ ನಡೆಯಲಿದೆ. ಯುಎಇ ಬಂದವರು ಇದರ ಸವಿಯನ್ನು ಉಣದೇ ಇದ್ದರೇ ತಮ್ಮ ವಿಸಿಟ್ ಗೆ ಬೆಲೆ ಇರೋಲ್ಲ ,ಪ್ರವಾಸ ಕೈ ಗೊಳ್ಳುವವರು ಅಕ್ಟೊಬರ್ ಯಿಂದ ಎಪ್ರಿಲ್ ಒಳಗೆ ಬೇಟಿ ನೀಡಿದರೇ ಒಳ್ಳೆದು .ಆ ಸಮಯದಲ್ಲಿ ಇದು ಕಾಣ ಸಿಗುತ್ತದೆ
Subscribe to:
Post Comments (Atom)
ದುಬೈಯ ಗ್ಲೋಬಲ್ ವಿಲೇಜ್ !
ಯು.ಎ.ಇ(ಅರಬ್ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...
-
ಶ್ರೀ ಕೋಟಿಲಿಂಗೇಶ್ವರ ದೇವರು , ಕೋಟೇಶ್ವರ ಶ್ರೀ ಕ್ಷೇತ್ರ ಕೋಟೇಶ್ವರವು ಪರಮ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದ್ದು ಸಪ್ತ ಪವಿತ್ರ ಸಪ್ತ ಕ್ಷೇತ್ರಗಳಲ್ಲಿ ಮುಖ್...
-
ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ, ಕುಂದಾಪುರ ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ...
-
ಇತಿಹಾಸ : ಈ ಹಿಂದೆ ರಾವಣನ ಬಂಧುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ...


No comments:
Post a Comment