ಪತ್ರಿಕೋದ್ಯಮ ಅಂದರೆ...
ಪತ್ರಿಕೋದ್ಯಮವೆಂದರೆ ಹೀಗೆ
ಗಿಜಿಗುಡುವ traficನಲ್ಲಿ
ಬೈಕ್ ಓಡಿಸಿದ ಹಾಗೆ
ಒಮ್ಮೆ ನೇರ ದಾರಿ
ಮತ್ತೊಮ್ಮೆ ಸಾಲು ವಾಹನ, ಅದ್ದ ಬರುವ ಸೈಕಲ್ಲು
ಬಸ್ಸು ಕಾರು, ಲಾರಿ, ರಿಕ್ಷ, ಕಿವಿಗದಸಿಕ್ಕುವ ಹಾರನ್
ತಟ್ಟನೆ ಬೀಳುವ ಕೆಂಪು ಸಿಗ್ನಲ್.
ಹಾಗೆಯೆ
ಬೆಳಿಗ್ಗೆ ಉದ್ಘಾಟನೆ, ಬಳಿಕ ಪ್ರತಿಭಟನೆ ಧರಣಿ, ಪ್ರತಿಕೃತಿ ದಹನ
ಅವರು ಹಾಗೆಂದರು, ಇವರು ಹೀಗೆಂದರು ಒಟ್ಟಾರೆ ಪತ್ರಕರ್ತರ ತಲೆ ತಿಂದರು.
ಎಲ್ಲ ಬರೆದಾಗ ಸಂಪಾದಕರ ಸಿಗ್ನಲ್ ಬಂತು
ಟ್ರಾಫಿಕ್ನ ಕೆಂಪು ದೀಪದಂತೆ
ಪತ್ರಿಕೋದ್ಯಮವೆಂದರೆ ಹೀಗೆ
ಅಪ್ಪಟ ವೇಶ್ಯೆಯ ಹಾಗೆ
ಎಲ್ಲರು ಬಳಸುತ್ತಾರೆ ತಮ್ಮ ಸುಖಕ್ಕೆ
ನಾಲಗೆ ತೆವಲಿಗೆ, ಪ್ರಚಾರದ ತೀಟೆಗೆ
ಬಳಿಕ ಎಸೆಯುತ್ತ್ತಾರೆ ಎಂಜಲೆಲೆಯಂತೆ ...
ಹೇಗಿದೆ ಹೇಳ್ತೀರಾ ಪ್ಲೀಸ್
No comments:
Post a Comment