Monday, 14 November 2011

ಡೈಲಾಗ್ಸ್ ಡೆಲಿವರಿ( ಸಂಗ್ರಹ )

ಮನಸ್ಸು ಮಾಡಿ ದ್ರೆ ಜಗತ್ತಿನಲ್ಲಿ ಯಾರನ್ನು ಬೇಕಾದರೂ ಸೋಲಿಸ ಬಹುದು  
ಆದರೆ  
ಸೋಲಿನಲ್ಲಿ ಯೂ ನಗುವವರನ್ನು ಮಾತ್ರ ಸೋಲಿಸಲು ಆಗೂದಿಲ್ಲ. 
-- 
ಲೈಫ್ ಲಾಂಗ್ ಸ್ನೇಹ ಉಳಿಸೋಕೆ ಇರೋ ದಾರಿ  
. ನೀವು ಸಿಟ್ಟಿನಲ್ಲಿದ್ರೆ ಫ್ರೆಂಡ್ ಜೊತೆ ಮಾತಾಡೋಕೆ ಹೋಗ್ಬೆಡಿ  
. ಫ್ರೆಂಡ್ ಸಿಟ್ಟ್ನಲ್ಲಿದ್ರೆ ಹೇಳಿದ ಮಾತನ್ನು ಸೀರೆಯಸ್ಸ್ ಆಗಿ ತಕೊಬೇಡಿ .. 
---- 
ನಗುವಿಗಿಂತ ಕಣ್ಣಿರೆ ತುಂಬಾ ಮುಖ್ಯ  
ನೀವು ಯಾರನ್ನೇ ನೋಡಿ ನಗಬಹುದು  
but 
ಕಣ್ಣೀರು ಹಾಗಲ್ಲ ನಿಮ್ಮ ಹೃದಯಕ್ಕೆ ಹತ್ತಿರ ವಾದವರಿಗೆ ಮೀಸಲು .. 
---- 
ಪ್ರೀತಿ ಇಲ್ಲದಾಗ ಖುಷಿ ಇರುತ್ತೆ  
ಪ್ರೀತಿ ಇದ್ದಾಗ ನೋವು ಇರುತ್ತೆ  
ನೋವು ಬಂದಾಗ ಬದುಕು ಏನು ಅಂತ ಅರ್ಥ ಆಗುತ್ತೆ  
ಬದುಕಿಗಾಗಿ ಪ್ರೀತಿ ..ಪ್ರೀತಿ ಗಾಗಿ ಬದುಕು ಅಲ್ವಾ? 
--------- 
ಗುಲಾಬಿ ಹೂವಿನ ಮನದಾಳದ ಮಾತು : 
ಪ್ರೀತಿಸಲು ಗೊತ್ತಿಲ್ಲದ ಹುಡುಗಿಯ ಮೂಡಿ ಯಲ್ಲಿರುದಕಿಂತ  
ಪ್ರೀತಿಸಿ ಸೋತು ಹೋದ ಹುಡುಗನ ಗೋರಿಯ ಮೇಲಿರುದು ನಂಗಿಷ್ಟ  
--- 
ಒಳ್ಳೇ ಗುಣ ಮನಸ್ಸಿನ ಆಸ್ತಿ  
ಒಳ್ಳೇ ಪ್ರೀತಿ ಹೃದಯದ ಆಸ್ತಿ  
ಒಳ್ಳೇ ಸಂಬಂದ ಜೀವನದ ಆಸ್ತಿ  
----- 
ಕನಸು ನೂರಿರಲಿ  
ಮನಸು ಒಂದೇ ಇರಲಿ  
ಯೋಚನೆ ಸಾವಿರ ವಿರಲಿ  
ಗುರಿ ಒಂದೇ ಇರಲಿ 
------- 
ನೀವು ಪ್ರೀತಿಸೋ ಹೃದಯಕ್ಕೆ  
ನಿಮ್ಮ ಪ್ರೀತಿ ಗೊತ್ತಿರುದಿಲ್ಲ  
ನೀವು ಪ್ರೀತಿಸೋ ಹೃದಯಕ್ಕೆ  
ನಿಮ್ಮ ಪ್ರೀತಿ ಗೊತ್ತಿರಲ್ಲ  
ಆದರೆ  
ನಿಮ್ಮನ್ನು ಪ್ರೀತಿಸೋ ಹೃದಯಕ್ಕೆ ನಿಮ್ಮನ್ನು ಬಿಟ್ಟು ಬೇರೆ  
ಏನೂ ಗೊತ್ತಿರೋಲ್ಲ ........ 
------ 
ಹೃದಯ ದಲ್ಲಿ ಪ್ರೀತಿ ಅನ್ನು ದು ದೇವರು ಬರೆದ ಒಲವಿನ ಅಕ್ಷರ  
ಕೆಲವರು ಸಾಯೋ ತನಕ ಪ್ರೀತಿಸ್ತಾರೆ ..ಇನ್ನೂ ಕೆಲವರು ಪ್ರೀತಿಸ್ತಾನೆ ಸಾಯ್ತಾರೆ .. 
------ 
ಹೃದಯದಲ್ಲಿ ಬೇರೆಯವರನ್ನು ಬಚ್ಚಿಟ್ಟು ಕೊಳ್ಳುದು ತುಂಬಾ ಸುಲಭ  
ಆದರೆ  
ನಾವು ಬೇರೆಯವ ಹೃದಯದಲ್ಲಿ ಸೇರೋದು ತುಂಬಾ ಕಷ್ಟ ಅಲ್ವಾ? 
---------- 
ಇಷ್ಟ ಇಲ್ಲದೇ ಇರೋರನ್ನ  
ಇಷ್ಟ ಪಡೊತರ ನಟಿಸೋದು ತುಂಬಾ ಸುಲಭ  
ಆದ್ರೆ  
ಇಷ್ಟ ಪಡೊರನ್ನು ಇಷ್ಟ ಪಡದೇ ಇರೋ ತರಹ ನಟಿಸೋದು ತುಂಬನೆ ಕಷ್ಟ .. 

  • ಜೀವನದಲ್ಲಿ ಯಾರ ಮೇಲೂ ಯಾವತ್ತೂ ನಿರೀಕ್ಷೆ ಇಟ್ಕೋ ಬಾರದು ಯಾಕೆಂದರೆ ತುಂಬಾ ನಿರೀಕ್ಷೆ ಇಟ್ಕೊಂಡು ಕೂಡಲೇ ಜೀವನ ಹಾಳಗೋದು..
  • ಎಲ್ಲೊ ಇದ್ದವರು ಮನಸಿಗೆ ಹತ್ತಿರ ಆಗ್ತಾರೆ .ಕೆಲವರು ಪ್ರೀತಿನ ,ಕೆಲವರು ಖುಷಿನ ,ಇನ್ನು ಕೆಲವರು ನೋವನ್ನು ಕೊಟ್ಟು ಕಣ್ಮರೆ ಆಗ್ತಾರೆ ..
  • ಪ್ರೀತಿ ಅನ್ನುದು ಬಸ್ ಸ್ಟ್ಯಾಂಡ್ ತರಹ. ಬಸ್ ಹೋದರೂ ಸ್ಟ್ಯಾಂಡ್ ಅಲ್ಲೇ ಇರುತ್ತೆ .ಆದ್ರೆ ಸ್ನೇಹ ಅನ್ನುದು ಸೈಕಲ್ ಸ್ಟ್ಯಾಂಡ್ ತರಹ .ಸೈಕಲ್ ಹೋದರೂ ಸ್ಟ್ಯಾಂಡ್ ಅದರ ಹಿಂದೇನೆ ಹೋಗುತ್ತೆ ..
  • ಮನಸಿನ್ನಲ್ಲಿರುವ ಫ್ರೆಂಡ್ ನ ನೋಯಿಸ ಬೇಡಿ .ಹತ್ತಿರದಲ್ಲಿರುವ ಫ್ರೆಂಡ್ ನ ರೆಗಿಸ್ಬೇಡಿ .ಕಣ್ಣೆದುರಿರುವ ಫ್ರೆಂಡ್ ನ ದ್ವೆಷಿಸ್ಬೇಡಿ.ದೂರ ಇರೋ ಫ್ರೆಂಡ್ ನ ಮರಿಬೇಡಿ ..
  • ನೋಯಿಸಿದ ಮನಸ್ಸನ್ನು ತುಂಬಾ ಪ್ರೀತಿಸು .ಆದ್ರೆ ಪ್ರೀತಿಸುವ ಮನಸ್ಸನ್ನು ನೋಯಿಸಬೇಡ .ಯಾಕೆಂದರೆ ಆ ಮನಸ್ಸು ಗುಲಾಬಿ ಯಂತೆ ಒಮ್ಮೆ ಬಾಡಿದ್ದರೆ,ಮತ್ತೆ ಅರಳೂದಿಲ್ಲ.
  • ಒಂದು ವರ್ಷದಲ್ಲಿ ನೂರು ಜನರನ್ನು ಸ್ನೇಹ ಮಾಡೂದು ಸಾಧ್ಯವಿಲ್ಲ ಕಣ್ರೀ .ಆದ್ರೆ ಒಂದು ಸ್ನೇಹವನ್ನು ನೂರು ವರ್ಷ ಉಳಿಸಿಕೊಳ್ಳುದು ಜೀವನದ ದೊಡ್ಡ ಸಾಧನೆ ..
  • ಸುಂದರವಾದ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಹೆಸರಿದೆ .ಆದ್ರೆ ಸುಂದರವಾದ ಹೃದಯದಲ್ಲಿ ನಮಗೆಲ್ಲರಿಗೂ ಇರುದು ಒಂದೇ ಹೆಸರು ಅದೇ ಸ್ನೇಹ .
  • ಮನಸ್ಸು ಮನಸ್ಸಿನಿಂದ ಮನಸಾರೆ ಇಷ್ಟ ಪಟ್ಟ ,ಬೇರೆ ಮನಸಿನಿಂದ ಮನಸ್ಸಿಗಾಗಿ ಇಷ್ಟ ಪಡೋ ಮನಸನ್ನು ಬೇಡ ಮನಸ್ಸು ತನ್ನ ಮನಸ್ಸನ್ನೇ ಮೋಸ ಮಾಡಿಕೊಳ್ಳುತ್ತೆ .
  • ಪ್ರೀತಿಸೋರೆಲ್ಲ ಒಂದಾಗಬೇಕೆಂಬ ಆಸೆ ಇರುತ್ತೆ  ಬಟ್ ಒಂದಾಗಲ್ಲ ಅಂತ ಗೊತ್ತಿದ್ದರೂ ,ಜೀವಕಿಂತ ಹೆಚ್ಚಾಗಿ ಪ್ರೀತಿಸ್ತರಲ್ಲ ಅದು ನಿಜವಾದ ಪ್ರೀತಿ ..
  • ಗುಲಾಬಿಯಂತೆ ಪ್ರೀತಿ ಸಂಪಿಗೆ ಯಂತ ನಗು ,ಮಲ್ಲಿಗೆ ಯಂತ ಹೃದಯ ,ಸೇವಂತಿಯಂತ ಕನಸ್ಸು ನಿಮ್ಮದಾಗಿರಲಿ.
  • ನಗಿಸೋ ನೂರು ಫ್ರೆಂಡ್ ಗಳಿಗಿಂತ ,ಕಣ್ಣಿರು ಒರೆಸುವ ಒಬ್ಬ ಫ್ರೆಂಡ್ ಮೇಲು .ಯಾಕೆಂದರೆ ನಗಿಸೋ ಫ್ರೆಂಡ್ ಎಲ್ಲರಿಗೂ ಸಿಗ್ತಾರೆ .ಆದ್ರೆ ನೋವಿಗೆ ಸ್ವಂದಿಸುವ ಫ್ರೆಂಡ್ ಸಿಗೋದು ತುಂಬಾ ಕಷ್ಟ 
  •  -ಕನಸು ಕಾಣಬೇಕು ನಿಜ .ಆದರೆ ಕನಸ್ಸನ್ನು ನನಸು ಮಾಡಿಕೊಳ್ಳೋಕೆ ಕಷ್ಟಪಡಬೇಕು  ಅನ್ನುದು ಕೂಡ ಅಷ್ಟೇ ನಿಜ ..

  • -ಅರಿಯಲಾಗದ ಮನಸ್ಸಿಗೆ ತಿಳಿಯಲಾಗದಷ್ಟು ನೋವು ನೋಯಿಸುದು ಪ್ರೀತಿ .ಆದರೆ ನೋವಿಗೆ ನೂರು ದಾರಿ ಹುಡುಕಿ ಕೊಡುದು ಸ್ನೇಹ ..

    -ಜೀವನದಲ್ಲಿ ಒಂದಲ್ಲ ಒಂದು ನೋವು ಎಲ್ಲರಿಗೂ ಇರುತ್ತೆ ಆದರೆ ಬೇರೆಯವರ ಕಷ್ಟದಲ್ಲಿ ತನ್ನ ನೋವನ್ನು ಮರೆತು ಅವರ ಕಷ್ಟಕ್ಕೆ ಸ್ವಂದಿಸುವ ಜೀವನವೇ ನಿಜವಾದ ಫ್ರೆಂಡ್ .

    -ಕನಸು ಇಷ್ಟ ಪಡೋ ಜೀವದ ಜೊತೆ ನೂರು ವರ್ಷ ಬದುಕುದಕಿಂತ ಮನಸ್ಸು ಇಷ್ಟ ಪಡೋ ಜೀವದ ಜೊತೆ ಮೂರು ನಿಮಿಷ ಬದುಕುದೆ ನಿಜವಾದ ಬದುಕು ..

    -
    ನಗುವಿನಲ್ಲಿರುವ ನೋವನ್ನು ಮನದಲ್ಲಿರುವ ಮಾತನ್ನು ಕೊಪದಲ್ಲಿರುವ ಪ್ರೀತಿಯನ್ನು ,ಅರಿಯದ ಮಾಡಿದ ತಪ್ಪನ್ನು ಮರೆಸುದೇ ನಿಜವಾದ ಸ್ನೇಹ .

    -
    ನಿಮ್ಮ ನಿರೀಕ್ಷೆ ಕೈ ತಪ್ಪಿ ಹೋದರೆ ಯಾವತ್ತೋ ದುಖಿಸಬೇಡಿ ,ಸಂತೋಷದಿಂದಿರಿ .ಯಾಕೆಂದರೆ ದೇವರು ನಿಮ್ಮ ನಿರೀಕ್ಷೆಗಿಂತ ಒಳ್ಳೆದನ್ನು ಕೊಡಲು ಯೋಚಿಸುತ್ತಾನೆ .

    -
    ಪ್ರೀತಿ ಕೇವಲ ಒಂದು ಹೃದಯವನ್ನು ಗೆಲ್ಲುತ್ತೆ .ಒಂದು ಮನಸನ್ನು ಖುಷಿಯಾಗಿಡುತ್ತದೆ ಬಟ್ ಮಮತೆ ತುಂಬಿದ ನಿರ್ಮಲ ವದ ಸ್ನೇಹ ಸಾವಿರ ಹೃದಯವನ್ನು ಗೆಲ್ಲುತ್ತೆ .

    -
    ಕನಸು ನೋವಾಗಿ ಕಣ್ಣಿರು ಬಂದ್ರೆ ಒರೆಸುದೆ ಕರ್ಚಿಪ್ .ಬಟ್ ಹೃದಯ ನೋವಾಗಿ ಕಣ್ಣಿರು ಬಂದರೆ ಒರೆಸುದು friendship.
  •  
    ಜೀವನದಲ್ಲಿ ಒಂದಲ್ಲ ಒಂದು ನೋವು ಇದ್ದೆ ಇರುತ್ತೆ  ಆದರೆ ಬೇರೆಯವರ ಕಷ್ಟದಲ್ಲಿ ತನ್ನ ನೋವನ್ನು ಮರೆತು ಅವರ ಕಷ್ಟಕ್ಕೆ ಸ್ವಂದಿಸುವ ಜೀವನವೇ ನಿಜವಾದ ಫ್ರೆಂಡ್ ..

    -ತುಂಬಾ ಇಷ್ಟ ಪಟ್ಟಾಗ ಸೀಗೋದು ನೋವು ತುಂಬ ನೋವು ನೋದಾಗ ಸಿಗೋದು ತಿಳುವಳಿಕೆ  ತುಂಬ ತಿಳುವಳಿಕೆ ಬಂದಾಗ ಸಿಗುವ ಅನುಭವೇ ಲೈಫ್ 

    -ನಗುವ ಕಣ್ಣುಗಳ ಹಿಂದೆ ಕಣ್ಣಿರು ಇರುತ್ತೆ .ಕೊಪಿಸುವ ಕಣ್ಣುಗಳ ಹಿಂದೆ  ಪ್ರೀತಿ ಇರುತ್ತೆ ಗೆಲುವಿನ ಕಣ್ಣುಗಳ ಹಿಂದೆ ಪರಿಶ್ರಮ ಇರುತ್ತೆ ..
    -ವಿಶ್ವಾಸಕ್ಕೆ ಬೇಕು ಸೂರ್ಯ. ಸೂರ್ಯನಿಗೆ ಬೇಕು ಭೂಮಿ .ಭೂಮಿಗೆ ಬೇಕು ಜೀವ .ಜೀವಕ್ಕೆ ಬೇಕು ಪ್ರೀತಿ.ಪ್ರೀತಿಗೆ ಬೇಕು ಸ್ನೇಹ ..

    -ನೂರು ಹೃದಯ ನಮ್ಮನ್ನು ಪ್ರೀತಿಸೋಕೆ ಇದ್ದರೂ ನಾವು ಪ್ರೀತಿಸೋ ಒಂದು ಹೃದಯದಿಂದ ಸಿಗುವ ಪ್ರೀತಿ ಮಾತ್ರ ಸಂತೋಷವನ್ನಾಗಿಸಲು ಸಾಧ್ಯ.

    -ನಮ್ಮ ನಗು ಯಾರಿಗಾದರೂ ನಗು ತರಲಿ ಬಟ್ ನಮ್ಮ ನಗು ಯಾರಿಗೂ ನೋವು ತರದಿರಲಿ ..
     
    -ಜೀವನದಲ್ಲಿ ನಗು ಇರಬೇಕು ಬಟ್ ನಗುವೇ ಜೀವನ ವಾಗಬರದು. ಲೈಫ್ ನಲ್ಲಿ ಸುಳ್ಳು ಹೇಳ್ಬೇಕು .ಸುಳ್ಳೇ ಜೀವನ ಆಗಬಾರದು ..
     
    -ನಗು ಮುಖ ಸಾವಿಗೆ ತುಂಬ ದೂರ .ಅಳು ಮುಖ ನೋವಿಗೆ ತುಂಬ ಹತ್ತಿರ .ಮುಖದ ಮೇಲೆ ಮುಗುಳು ನಗು ಇದ್ದರೆ,ಹರಿವ ನೀರು ಕೂಡ ನಾಚಿಕೆ ಪಡುತ್ತೆ.

    -ಯಾರು ಯಾರಿಂದ ಯಾರನ್ನ ಯಾರಿಗೆ ಯಾವಾಗ ಎಲ್ಲಿ ಹೇಗೆ ಬೇಕಾದರೂ ದೂರ ಮಾಡಬಹುದು ಆದರೆ ಮನಸ್ಸಿನಿಂದ ,ನೆನಪಿನಿಂದ ಸ್ನೇಹದಿಂದ ಪ್ರೀತಿಂದ  ಯಾವತ್ತೂ  ದೂರ ಮಾಡೋಕಾಗೊಲ್ಲ 
    .
    -ಜೀವನದಲ್ಲಿ ಜನ ನಿಮ್ಮಿಂದಾಗಿ ನಗಬೇಕು .ನಿಮ್ಮನ್ನು ನೋಡಿ ನಗಬಾರದು .ಅದೇ ರೀತಿ ನಿಮ್ಮಿಂದ ಅಳಬಾರದು ,ನಿಮಗಾಗಿ ಅಳಬೇಕು .

    -ಪ್ರತಿ ಹೃದಯಗಳಲ್ಲೂ ನೋವಿರುತ್ತೆ .ಆದರೆ ತೋರ್ಸೋ ರೀತಿ ಬೇರೆ-ಬೇರೆ ಯಗಿರುತ್ತೆ .ಕೆಲವರು ಕಣ್ಣಿರಿನಲ್ಲಿ ನೋವನ್ನು ಹೊರ ಹಾಕುತ್ತಾರೆ ,ಕೆಲವರು ನಗುವಿನಲ್ಲೇ ಆ ನೋವನ್ನು ಮುಚ್ಚಿಡುತ್ತಾರೆ..

    -ಸಣ್ಣ ಕೋಪ ,ಪುಟ್ಟ ಮನಸು ,ಚಿಕ್ಕ ನಗು ,ದೊಡ್ಡ ಭಾವನೆ ,ಒಂದಷ್ಟು ಪ್ರೀತಿ ,ಬೆಟ್ಟದಷ್ಟು ಕಾಳಜಿ ,ಕೆಲೊಮ್ಮೆ ಜಗಳ ,ನೂರಾರು sorry ,ಎಲ್ಲ ಸೇರಿದ್ದರೆ ಅದೇ ನಿಜವಾದ ಪ್ರೀತಿ .

    -ನಾಳೆ ಅನ್ನುದು ಕನಸು ನಿನ್ನೆ ಅನ್ನುದು ಅಳಿಸು ,ಇಂದು ಎನ್ನುದು ಸೊಗಸು ,ಆ ಸೊಗಸನ್ನು ಸಿಹಿ ಯಾಗಿ ಸ್ವೀಕರಿಸಬೇಕು ಸಾವಿರ ನದಿಗಳಿಗೆ  ಸಾಗರವೇ ಸಂಗಮ .ಆ ಸಾಗರದ ಮಡಿಲಲ್ಲಿ ಅಲೆಗಳ ಸಂಭ್ರಮ .ಸಾವಿರ ತಾರೆಗಳಿಗೆ  ನಗುವೇ ಸಂಭ್ರಮ .ಆ ಚಂದ್ರನ ನಗುವಿಗಿಂತ  ಸುಂದರ ಈ ಗೆಳತನ .
    .
    -ಕಣ್ಣು ಪ್ರೀತಿಗೆ ದಾರಿ .ಹೃದಯ ಪ್ರೀತಿಯ ಸ್ವರ್ಶ .ಕನಸು ಪ್ರೀತಿಯ ಪ್ರಪಂಚ .ಮಿಡಿತ ಪ್ರೀತಿಯ ಸಂಗೀತ .ಆದರೆ ಕಣ್ಣಿರು ? ನಿಜವಾದ ಪ್ರೀತಿಯ ಉಡುಗೊರೆ .

    -ಒಂದು ಮಳೆಯ ಹನಿ ನೋಡಲು ತುಂಬ ಚಿಕ್ಕದು ಆದರೆ ಆ ಹನಿಗಾಗಿ ಭೂಮಿ ಕಾಯುತ್ತಿರುತ್ತೆ .
    .
    -ನಮ್ಮ  ಬುದುಕಿನ ಆಯಸ್ಸು  ಎಷ್ಟು ಅನ್ನುದು ಮುಖ್ಯ ವಲ್ಲ .ಆ ಬದುಕಿನಲ್ಲಿ ನಾವು ಹೇಗೆ ಬದುಕ್ತೇವೆ ಅನ್ನುದು ಮುಖ್ಯ .

    -ಯಾರು ಇಲ್ಲದಾಗ ನೆನಪಾಗುದುಸ್ನೇಹ ಅಲ್ಲ .ಎಲ್ಲರೂ ಇದ್ದಾಗ ಒಬ್ಬರು ಇಲ್ಲ ಅಂತ ಫೀಲ್ ಆಗುದೇ ನಿಜವಾದ ಸ್ನೇಹ .

    -ಮನಸ್ಸು ಮನಸ್ಸಿನಿಂದ ಮನಸಾರೆ ಇಷ್ಟ ಪಟ್ಟ ಬೇರೆ ಮನಸ್ಸಿನಿಂದ ಮನಸ್ಸಿಗಾಗಿ ,ಇಷ್ಟ ಪಡದೇ ಮನಸ್ಸನ್ನು ಬೇಡ ಆನ್ನೋ ಮನಸ್ಸು ತನ್ನ ಮನಸ್ಸುನ್ನು ಮೋಸ ಮಾಡಿಕೊಳ್ಳುತ್ತೆ .

    -ಆಕಾಶದಂತೆ ವಿಶಾಲವಾಗಿ ,ಸೂರ್ಯನಂತೆ ಪ್ರಕಶವಾಗಿ ಚಂದ್ರನಂತೆ ಸುಂದರವಾಗಿ ,ಹೂವಿನಂತೆ  ಕೋಮಲವಾಗಿ ,ಚಿರಕಾಲ ಇರಲಿ ಈ ಸ್ನೇಹ ...

     -ಒಬ್ಬ ಫ್ರೆಂಡ್  ನ ಮರೆಯೋದರಿಂದ ನಿಮಗೆ ಒಳ್ಳೆದಾಗುತ್ತೆ ಅನ್ನುದಾದರೆ   ಮರೆತು ಬಿಡಿ .ಬಟ್ ಆ ಫ್ರೆಂಡ್ ನಿಮ್ಮನ್ನ ಮರಿತಾರೆ ಅಂತ ಮಾತ್ರ ಅಂದ್ಕೋಬೇಡಿ .

    -ಜೀವನ ಒಂದು ಗಿಡ ನಗುವೇ ಅದರ ಹೂವು .ಕಷ್ಟವೇ ಅದರ ಮುಳ್ಳು .ಪ್ರೀತಿಯೇ ಅದರ ಪರಿಮಳ .ಆ ಪರಿಮಳವೇ ಪ್ರೆಂಡ್ಶಿಪ್ .
     
    -ಎಲ್ಲಿ ಮನಸಿರೋತ್ತೋ ಅಲ್ಲಿ ಹೃದಯ ಇರುತ್ತೆ ಎಲ್ಲಿ ಹೃದಯ ಇರುತ್ತೆ ಅಲ್ಲಿ ಪ್ರೀತಿ ಇರುತ್ತೆ
     
    -ಜೀವನ ಎಲ್ಲರಿಗೂ ಅರ್ಥ ವಾಗಿಯೇ ಆಗುತ್ತೆ  ಆದರೆ ಅರ್ಥ ಆಗುವ ಹೊತ್ತಿಗೆ ಅರ್ಧ ಜೀವನ ಮುಗಿದಿರುತ್ತೆ .

    -ಎಲ್ಲ ನೆನಪುಗಳನ್ನು ಬಿಟ್ಟು ಬಹಳ  ದೂರ ಹೋಗುದು ಸುಲಭ .ಆದರೆ ಎಲ್ಲರ ಮನಸಿನಿಂದ ದೂರಗೂದು ತುಂಬ ಕಷ್ಟ . ಅದು ಸಾಧ್ಯವೂ ಇಲ್ಲ ,ನೆನಪೊಂದೆ ಅಮರ .
     
    -ಫ್ರೆಂಡ್ ಎನ್ನುದು ಎಲ್ಲ ನೋವಿಗೂ ಒಂದು ಮೆಡಿಸೆನ್ ಬಟ್ ಫ್ರೆಂಡ್ ಇಂದ ಹುಟ್ಟಿದ ನೋವಿಗೆ ಯಾವದೇ ಮೆಡಿಸಿನ್ ಇಲ್ಲ
     
    -ಮನಸು ಬಂಗಾರ ಕನಸು ಶೃಂಗಾರ ,ಜೀವನ ಅವಾಂತರ ಪ್ರೀತಿ ಮಧುರ ,ಸ್ನೇಹ ಸುಮಧುರ  ಅದುವೇ ನೆನಪಿನ ಸಾಗರ .

    -ಯಾವಾಗಲೂ ಒಳ್ಳೆಯವರಿಗೆ ಒಳ್ಳೆಯವರಾಗಿರಿ ಬಟ್ ಕೆಟ್ಟವರಿಗೆ ಮಾತ್ರ ಕೆಟ್ಟವರಾಗಿ ಇರಬೇಡಿ . ಯಾಕೆಂದರೆ ಕಣ್ಣಿರನ್ನು ನೀರಿಂದ ತೊಳೆಯಬಹುದು .ಬಟ್ ರಕ್ತ ದಿಂದ ರಕ್ತವನ್ನು ತೊಳೆಯಲು ಸಾಧ್ಯನ ?

    -ಮನಸು ದೊಡ್ಡದು ಯಾಕೆಂದರೆ ಅದು ಎಲ್ಲರಿಗೂ ಜಾಗ ಕೊಡುತ್ತೆ ಆದರೆ ಹೃದಯ ಒಳ್ಳೇದು ಅದು ಒಬ್ಬರಿಗೆ ಮಾತ್ರ ಮೀಸಲಾಗಿರುತ್ತೆ.

    --ಹುಡುಕುವ ಪ್ರೀತಿಗಿಂತ ಜೊತೆಗಿರುವ ಸ್ನೇಹ ಚೆಂದ .ಕಾಣುವ ಕನಸಿಗಿಂತ ಕಾಣದೆ ಇರುವ ಕಲ್ಪನೆ ಚೆಂದ ಬರೆಯುವ ಬರಹ ಗಿಂತ ಅಳಿಸಲಾಗದ ಸವಿ ನೆನಪು ಚೆಂದ .

    -ಸುಖ ಇದ್ದರೆ ಜಗತ್ತು ಸುಂದರ ಅನ್ನಿಸುತ್ತೆ ದುಖ ಇದ್ದರೆ ಜಗತ್ತು ಬೇಸರ ಅನ್ನಿಸುತ್ತೆ .ಜೀವನದಲ್ಲಿ ಒಳ್ಳೆ ಫ್ರೆಂಡ್ ಇದ್ದರೆ ನೀರಿನ ಹನಿಕೂಡ 7 ಅಪ್ ಅನ್ನಿಸುತ್ತೆ .

    -ಎಲ್ಲ ನೋವುಗಳನ್ನು ಬಿಟ್ಟು ಬಲು ದೂರ ಹೋಗುದು ತುಂಬ ಸುಲಭ ಆದರೆ ಎಲ್ಲ ಮನಸಿನಿಂದ ದೂರವಾಗುವದು  ತುಂಬ  ಕಷ್ಟ .

    -ಪ್ರೀತಿ ಮಾಡುವುದು ಸುಲಭ ವಲ್ಲ ಪ್ರೀತಿ ಮಾಡದೇ ಇರುದು ಸುಲಭ ವಲ್ಲ ಬಟ್ ಯಾರದ್ರೂ ಒಮ್ಮೆ ನಮ್ಮ ಹೃದಯ ಮುಟ್ಟಿದರೆ ಅವರನ್ನು ಮರೆಯುದು ತುಂಬ ಕಷ್ಟ ಅಲ್ವ ?

    -ಹಾರ್ಟ್ ನಲ್ಲಿರುವ ಪ್ರೀತಿ ,ಮನಸಿನಲ್ಲಿರುವ ಭಾವನೆ ,ಉಸಿರಿನಲ್ಲಿರುವ ಜೀವ ಮುಖದಲ್ಲಿರುವ ಕಂಬನಿ ಮಾತಿನಲ್ಲಿರುವ  ಮೌನ ತಿಳಿಯೋದು ನಿಜವಾದ ಸ್ನೇಹಕ್ಕೆ ಮಾತ್ರ ಸಾಧ್ಯ.
     
    -ಕಷ್ಟನ ಯಾರೂ ಬೇಕು ಅನ್ನೋಲ್ಲ .ಇಷ್ಟಾನ ಯಾರೂ ಸಾಕು ಅನ್ನೋಲ್ಲ .ಪ್ರೀತಿನ ಯಾರೂ ಗೆಲ್ಲೋಕಾಗಲ್ಲ,ಸ್ನೇಹ ಮಾಡದೇ ಯಾರೂ ಯಾರೂ ಬದುಕೋಕೆ ಆಗೋಲ್ಲ .
     
    -ಪ್ರೀತಿ ಅಪರಾಧ ಆದರೆ ಪ್ರಿತ್ಸ್ಬೇಡಿ .ಪ್ರೀತಿನ ದೇವರು ಅಂದರೆ ಕಳ್ಕೊಬೇಡಿ,ಯಾರಿಗಾದರೂ ನಿಮ್ಮ ಪ್ರೀತಿ ಇಷ್ಟ ಇದ್ರೆ ಆ ಪ್ರೀತಿಗೆ ಎಂದೂ ಕಣ್ಣಿರು ಹಾಕಿಸ್ಬೇಡಿ.

    -ನೆನಪು ಅನ್ನುದು ತುಂಬ ಇರುತ್ತೆ .ಅಮರೆವು ಅನ್ನುದು ಬೇಗ ಬರುತ್ತೆ .ನಾಳೆ ಅನ್ನುದು ಇದ್ದೆ ಇರುತ್ತೆ .ಆದರೆ ನಿನ್ನೆ ಆನ್ನುದು ಮತ್ತೆ ಬರೋದೆ ಇಲ್ಲ ..

    -ಜೀವನ ಕಿಂತ ಜೀವನ ಮುಖ್ಯ,ಪ್ರೀತಿ ಕಿಂತ ಪ್ರೀತಿಸೋರು ಮುಖ್ಯ .ಅದಕ್ಕೆ ಪ್ರೀತಿಗೆ ಜೀವ ಕೊಡಿ ಪ್ರೀತಿಸೋರಿಗೆ  ಜೀವನ ಕೊಡಿ .

    -ಮನಸ್ಸಿನಲ್ಲಿರೋ  ಫ್ರೆಂಡ್ ನ ನೋಯಿಸಬೇಡಿ ಹಾರ್ಟ್ ನಲ್ಲಿರುವ ಫ್ರೆಂಡ್ ನ ರೆಗಿಸ್ಬೇಡಿ .ಕಣ್ಣಿರು ಎದುರು ಇರೋ ಫ್ರೆಂಡ್ ನ ದ್ವೆಷಿಸ್ಬೇಡಿ.ದೂರದಲ್ಲಿರುವ  ಫ್ರೆಂಡ್ ನ ಮರಿಬೇಡಿ .

    -ನೆನಪು ಬರಿ ಮಾತಿನಲ್ಲಿ  ಇದ್ದರೆ ಮರಿಯಲು ಸುಲಭ ಆದರೆ ನೆನಪು ಹೃದಯದಲ್ಲಿದ್ದರೆ ಮರೆಯೋದು ಕಷ್ಟ .

    -ಕಲ್ಲು ಮನಸಿನ ನೂರು ದೇವರಿಗಿಂತ ಅಮ್ಮ ಅನ್ನೋ ದೇವತೆ  ಸಾಕು ಮೋಸ ಮಾಡೋ 100 ಫ್ರೆಂಡ್  ಗಿಂತ ಸ್ನೇಹ ವಿಶ್ವಾಸ ತೋರೋ ಫ್ರೆಂಡ್ ಮುಖ್ಯ .

    -ಇಷ್ಟ ಪಡೋರಿಗಾಗಿ ಏನೂ ಬೇಕಾದರೂ ತ್ಯಾಗ ಮಾಡೋದಕ್ಕೆ ತಯಾರಾಗಿರ್ತೇವೆ ಆದರೆ ನಾವು ಇಷ್ಟ ಪಡೋರನ್ನ ಬೇರೆ ಯಾರಿಗೂ ತ್ಯಾಗ ಮಾಡೋಕೆ ತಯಾರಿರೋಲ್ಲ ಅಲ್ವಾ ?

    -ಹೇಳಿ ಬರೋದು ಜೀವನ ಹೇಳದೆ ಬರೋದು ಮರಣ ,ತಿಳಿಯದೇ ಆಗೋದು ದ್ವೇಷ ತಿಳಿಯದೇ ಆಗೋದು ಪ್ರೀತಿ ಬಟ್ ಪ್ರೀತಿ ಬಗ್ಗೆ ಅವಹೇಳನ ಬೇಡ ಪ್ರೀತಿ ಸತ್ಯ 

    -ಯಾರನ್ನೋ ಇಷ್ಟ ಪಡ್ತೀವಿ ,ಯಾರೋ ಜೊತೆನೋ ಬದಕ್ತೀವಿ ಯಾರ-ಯಾರದ್ದೋ ನೆನಪು ಮಾಡ್ಕೊತ್ತಿವಿ ಕೆಲವರ ಮರಿತಿವಿ ಇನ್ನು ಕೆಲವರ ನೆನಪಲ್ಲೇ ಕೊರಗ್ತಾ ಇರ್ತಿವಿ ಕೊನೆಗೆ ಯಾರಿಗೂ ಹೇಳ್ದೇ ಹೊರಟು ಹೋಗ್ತಿವಿ  ಏನ್ ಲೈಫ್ .

    -ಮನಸ್ಸಿನ ಭಾವನೆ ಯನ್ನು ಹೇಳೋ ಅವಕಾಶ ಮಿಸ್ ಮಾಡ್ಕೋ ಬೇಡಿ .ಯಾಕೆಂದರೆ ಮನಸ್ಸಿನೊಳಗಿನ ಮಾತುಗಳು ಹೇಳದಿದ್ದರೆ ಅದು ಹೃದಯವನ್ನು ಗಾಯಗೊಳಿಸುತ್ತೆ.

    -ನಗೋ ಕಣ್ಣುಗಳ ಹಿಂದೆ ಕಣ್ಣಿರು ಇರುತ್ತೆ ಕೊಪಿಸೋ ಕಣ್ಣಗಳ ಹಿಂದೆ ಪರಿಶ್ರಮ ವಿರುತ್ತೆ 
     
    -ನಿಜವಾದ ಫ್ರೆಂಡ್ ಯಾರು ಗೊತ್ತಾ ಮಳೆಯಲ್ಲಿ ನೆನೆದು ಬಂದಾಗ ಲೂ ನಮ್ಮ ಕಣ್ಣಿರನ್ನು ಗುರುತಿಸೋರೋ .
     
    -ಹಾರುವ ಹಕ್ಕಿ ನೀರಲ್ಲಿ ಈಜ ಬಹುದು ,ಬಟ್  ಈಜುವ ಮೀನು ಯಾವತ್ತೋ ಹಾರೋಲ್ಲ ಅದೇ ರೀತಿ ಪ್ರೀತಿಸಿದ ಹೃದಯ ದೂರ ಆಗಬಹುದು  ಬಟ್ ಅವರ ನೆನೆಪು ದೂರ ಆಗೋಲ್ಲ .

    -ಒಲವಿನ ಮನಸ್ಸು ಮುಳ್ಳಗದಿರಲಿ,ಅರಳಿದ ಹೂವು  ಬಾಡದಿರಲಿ ,ಚಿಗುರಿದ  ಕನಸು ಕಲ್ಲಗಾದಿರಲಿ .

    -ದೇಹಕ್ಕೆ ಆತ್ಮ ಮನಸ್ಸಿಗೆ ಭಾವನೆ ,ಕನಸ್ಸಿಗೆ ಕಲ್ಪನೆ ಪ್ರೀತಿಗೆ ಹೃದಯ ..

    -ಗೆಲವು ನಿಮ್ಮನ್ನು ಪ್ರಪ೦ಚಕ್ಕೆ ಪರಿಚಿಸುತ್ತದೆ.ಆದರೆ ಸೋಲು ಎನ್ನುದು ಪ್ರಪಂಚವನ್ನು ನಿಮಗೆ ಪರಿಚಿಸುತ್ತದೆ 

    -ಒಂದು ಜೀವಕ್ಕೆ ನೀವೇ ಉಸಿರಾದರೆ ಆ ಉಸಿರು ನಿಮ್ಮ ಉಸಿರೆಂದು ಭಾವಿಸಿ ,ಉಸಿರನ್ನು ನಿಲ್ಲಿಸದೆ ,ಉಸಿರಿಗೆ ,ಉಸಿರಾಗಿ ಉಸಿರಿರೋತನಕ ಕಾಪಾಡಿ 

    -ಒಂದು ಕಣ್ಣಲ್ಲಿ ಅಳೋ ಕಾಗಲ್ಲ ,ಒಂದೇ ಹೃದಯ  ಸೇರಿದ್ದರೆ ಪ್ರೀತಿ ಮಾಡೋಕಾಗೊಲ್ಲ , ಸೊ ಒಂದೇ ಹೃದಯದಲ್ಲಿ  ಪ್ರೀತಿ ಹುಟ್ಟುತ್ತೆ ಅದು ಒಂದೇ ಕಣ್ಣಿಗೆ ಕಸ ಬಿದ್ದು ನೀರು ಬಂದ ಹಾಗೆ ..

4 comments:

  1. Nim yella kavana nd barahagalu A1 sir. Fantastic, super..!

    ReplyDelete
  2. ಸರ್ ನಿಮ್ಮ ಫೋನ್ ನಂಬರ್ ಕೊಡಿ ನನಗೆ ವಾಟ್ಸಪ್ ನಲ್ಲಿ ಎಲ್ಲಾ ಕಳಿಸಿ

    ReplyDelete

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...