-ಶಿವಕುಮಾರ್ ಹೊಸಂಗಡಿ
ಉಡುಪಿ :ಕ್ರಷಿ ಬದುಕಿಗೆ ಹೊಂದಿಕೊಂಡು ಹಿರಿಯರು
ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದ ಗ್ರಾಮೀಣ ಸೊಗಡಿನ ಹಬ್ಬಗಳಲ್ಲಿ ಒಂದು ಹೊಸತು ,ಅಥವಾ ಕದಿರು
ಕಟ್ಟುವ ಹಬ್ಬ . ನವರಾತ್ರಿ ಯಿಂದ ಪ್ರಾರಂಭ ವಾಗುವ ಈ ಸಾಂಪ್ರದಾಯಿಕ ಹಬ್ಬಕ್ಕೆ ಅದರದ್ದೇ ಯಾದ ಮಹತ್ವ
ಇದೆ.
ಪ್ರತಿ ಕಾರ್ಯದ ಆರಂಭಕ್ಕೂ ನಾವು ವಿಶೇಷತೆಯನ್ನು ನೀಡುತ್ತೇವೆ . ಅದರಲ್ಲೂ ಕರಾವಳಿಯ
ನಾಡಿನಲ್ಲಿ ಕೆಲವೊಂದು ಆಚರಣೆಗೆ ಬಹಳ ಮಹತ್ವ ಇದೆ ಹಾಗೆ ಆಚರಣೆಗಳವೆ . ಅದರಲ್ಲೂ ಕೃಷಿಯನ್ನು ಪರಂಪರೆ
ಎಂಬಂತೆ ಅನುಸರಿಸಿದ್ದೆವೆ . ಮಳೆಗಾಲದ ಆರಂಭದಲ್ಲಿ ನಾಟಿಯನ್ನು ವಿಶಿಷ್ಟ ಆಚರಣೆಯಲ್ಲೆ ಪ್ರಾರಂಭಿಸಿ
ಮಕ್ತಾಯಗೊಳಿಸಿ ನಂತರ ಹಚ್ಚಹಸಿರಾಗಿ ಕಂಗೊಳಿಸುವ ಫಸಲನ್ನು ಮನೆ ಮನ ತುಂಬಿಕೊಳ್ಳಲು , ಕಟಾವು ಪ್ರಾರಂಭಿಸುವ
ಮೊದಲು ಪೈರನ್ನು ಪೂಜಿಸುವ ಕ್ರಮವೇ ಹೊಸತು ಅಥವಾ ಕದಿರು ಕಟ್ಟುವ ಹಬ್ಬ . ಕುಂದಾಪುರ ಕನ್ನಡದಲ್ಲಿ
ಹೊಸ್ತು , ತುಳುವಿನಲ್ಲಿ ಕೊರಳ್ ಪರ್ಬ ,ಕನ್ನಡದಲ್ಲಿ ಕದಿರು ಕಟ್ಟುದು ಎಂದು ಕರೆಯಲಾಗುತ್ತದೆ . ಒಂದೊಂದು
ಊರಿನಲ್ಲಿ ಸೂಕ್ತ ದಿನದಂದು ಒಟ್ಟಿಗೆ ಅಚರಿಸಲ್ಪಡುತ್ತದೆ .ಕಷ್ಟಪಟ್ಟು ದುಡಿದ ಫಸಲನ್ನು ಮನೆ ತುಂಬಿಸಿಕೊಂಡು
ಪೂಜಿಸುವ ಆಚರಣೆಗೆ ಪ್ರತಿ ಮನೆಯಲ್ಲು ವಿಶೇಷ ಸ್ಥಾನವಿದೆ.
ಹೊಸತು ಹಬ್ಬವನ್ನು ಆಚರಿಸುವ ವಿಧಾನ :
”ಹೊಸತು” ಆಚರಣೆಯಲ್ಲಿ ಹೆಸರೇ ಹೇಳುವಂತೆ ಪ್ರತಿಯೊಂದು ಹೊಸದಾಗಿರಬೇಕೆಂದು ನಿಯಮವಿದೆ. ಪ್ರಾಥಮಿಕವಾಗಿ ಮನೆಯನ್ನು ಪೂರ್ಣ ಸ್ವಚ್ಛ ಗೊಳಿಸಿ ನೆಲಕ್ಕೆ ಹೊಸ ಮಣ್ಣು ಹಾಕಿ, ಸಗಣಿಯಿಂದ ಸಾರಣೆ ಮಾಡುತ್ತಾ. ಗೋಡೆಗಳಿಗೆ ಸುಣ್ಣಬಣ್ಣಗಳಿಂದ ಅಲಂಕರಿಸಲಾಗುತ್ತದೆ ಮನೆ ಮಂದಿಗೆಲ್ಲ ಹೊಸ ಬಟ್ಟೆಗಳನ್ನು ತರುವುದಲ್ಲದೇ ಅಂದಿನ ಅಡುಗೆಗಾಗಿ ಹೊಸ ಪಾತ್ರೆ ಇತ್ಯಾದಿಗಳನ್ನು ತರುವ ಚಟುವಟಿಕೆಯೂ ಇದೆ .
ಅಂದು ಮನೆ, ಚಪ್ಪರ, ತುಳಸಿಕಟ್ಟೆ ಇತ್ಯಾದಿಗಳನ್ನು ತಳಿರುತೋರಣಗಳಿಂದ ಅಲಂಕರಿಸಿ ಹೆಂಗಸರು ಹೊಸ ಗಡಿಗೆಯಿಂದ ನೀರು ತಂದು ಅಡುಗೆಗೆ ಸಿದ್ಧತೆ ನಡೆಸುತ್ತಾರೆ. ಗದ್ದೆಯಲ್ಲಿ ನಿಗದಿತ ಸ್ಥಳವನ್ನು ಗೊತ್ತು ಮಾಡಿ ಬಾಳೆಕಂಬ, ಕಬ್ಬಿನ ಕೋಲು ಹಾಗೂ ಮಾವಿನ ತೋರಣಗಳಿಂದ ಶ್ರಂಗರಿಸಿದ ಸ್ಥಳಕ್ಕೆ ಮಡಿಯುಟ್ಟು, ಪೂಜಾ ಸಾಮಗ್ರಿಯನ್ನು ಹಿಡಿದು ಮೆರವಣಿಗೆಯಲ್ಲಿ ಹೊಸತು ತರಲು ಗದ್ದೆಗೆ ಹೋಗಿ, ಆಗಲೇ ಸಿಂಗರಿಸಿದ ಸ್ಥಳದಲ್ಲಿ ಹಣ್ಣುಕಾಯಿಗಳಿಂದ ಪೂಜಿಸಿ, ಐದು ಬೆಳೆಯ ಬುಡಗಳನ್ನು ಒಟ್ಟು ಮಾಡಿ, ಒಂದು ಎಸಳಿನಿಂದ ಗಂಟು ಹಾಕಿ ಪೂಜೆ ಮಾಡಲಾಗುತ್ತದೆ ನಂತರ ಹಾಲು, ತುಪ್ಪ ಅರ್ಪಿಸಿ ಒಟ್ಟು ಮಾಡಿ ಗಂಟು ಹಾಕಿದ ಬೆಳೆಯನ್ನು ಕೊಯಿಲುಗತ್ತಿಯಿಂದ ಕೊಯ್ದು ಹಾಲಿನ ತಂಬಿಗೆಯಲ್ಲಿರಿಸಿ, ಹೊತ್ತು ಮೆರವಣಿಗೆಯಲ್ಲಿ ಮನೆಯ ಅಂಗಳಕ್ಕೆ ಬರುತ್ತಾರೆ. ಭತ್ತದ ತೆನೆಗಳನ್ನು ತುಳಸಿ ಕಟ್ಟೆಯಲ್ಲಿರಿಸಿ, ಹಾಲು, ಹಣ್ಣಿನಿಂದ ಪೂಜಿಸಿ ನಂತರ ಮನೆಯ ಮಾಣಗಿಯೊಳಗೆ ಆಗಲೇ ಸಿದ್ಧಪಡಿಸಿದ ಮಣೆಯ ಮೇಲಿನ ಸಗಣಿ ಗಣಪ ಹಾಗೂ ಕಲಶಗಳ ಪಕ್ಕದಲ್ಲಿಟ್ಟು ಪೂಜಿಸುತ್ತಾರೆ. ಹೊಸ ಭತ್ತದ ತೆನೆಗಳಿಂದ ಬಾಗಿಲ ತೋರಣ ಮಾಡಿ, ಬಾಗಿಲು ಹಾಗೂ ತುಳಸಿ ಕಟ್ಟೆಗೆ ಹಾಕುತ್ತಾರೆ.ಅಕ್ಕಿ ಶೇಖರಿಸಿಡುವ ಮಡಿಕೆಗೆ, ತುಳಸಿ, ಗ್ರಾಮದೇವತೆ, ಬಾವಿ, ತೆಂಗಿನಮರ, ಕೊಟ್ಟಿಗೆ, ಪಣತ, ಕಡಗೋಲು ಕಂಬ, ನಾಗರಬನ, ಭೂತದ ಬನ, ಕಣ, ಗೊಬ್ಬರ ಗುಂಡಿ ,ಯಾಂತ್ರಿಕ ವಸ್ತುಗಳಿಗೆ ಮಾವಿನ ಎಲೆ ಜೊತೆಗೆ ಭತ್ತದ ತೆನೆಯನ್ನು ಒಟ್ಟು ಗೂಡಿಸಿ ಕಟ್ಟಲಾಗುತ್ತದೆ . ಅಂದಿನ ಅಡುಗೆಗೆ ಹೊಸ ಭತ್ತವನ್ನು ಬಿಡಿಸಿ ಹಾಕುತ್ತಾರೆ. ಅಂದಿನ ನೈವೇದ್ಯಕ್ಕೆ ಹೊಸ ಬೆಳೆಯಿಂದ ಮಾಡಿದ ಪಾಯಸ ಇರಬೇಕು. ಅಡುಗೆಯನ್ನು ಉಂಡು ತೇಗುವಂತಿಲ್ಲ ಎಂಬ ನಿಷೇಧವಿದೆ. ತೇಗುವುದು ಲಯದ ಸಂಕೇತವೆಂದು ತಿಳಿಯುತ್ತಾರೆ. ಆತ್ಮೀಯರಿಗೆ ,ಸಂಬಂಧಿಕರಿಗೆ ಆಮಂತ್ರಿಸುತ್ತಾರೆ ಹಾಗೆ ಊಟದಲ್ಲಿ ಬಹುಬಗೆಯ ಪಲ್ಯಗಳೇ ವಿಶೇಷ . ಎಲ್ಲಕ್ಕಿಂತ ಮೊದಲು ಹೊಸ ಕದಿರಿನಿಂತ ಮಾಡಿದ ಅನ್ನವನ್ನೆ ತಿನ್ನಬೇಕು . ತಿನ್ನುವ ಮೊದಲು ನಮಗಿಂತ ಹಿರಿಯರಲ್ಲಿ ಹೊಸ್ತು ಊಟ ಮಾಡುತ್ತೇನೆ ಎಂದು ಹೇಳಿ ಊಟ ಮಾಡುವುದು ಕಡ್ಡಾಯ . ಊಟ ಮಾಡಿ ವೀಳ್ಯದೆಲೆ ಜಗಿಯುತ್ತ ನಮ್ಮೆಲ್ಲ ಗದ್ದಗೆ ಹೋಗಿ ಬಂದರೆ ಹೊಸ್ತು ಎನ್ನುವ ಸುಂದರ ಸಂಪ್ರದಾಯ ಮುಗಿದಂತೆ .