ಅಣ್ಣ-ತಂಗಿ ಭಾವನೆಯನ್ನು ಗಟ್ಟಿಗೊಳಿಸುವ ಈ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಹಿಂದೂ ಪಂಚಾಂಗದ ಪ್ರಕಾರ ನೂಲ ಹುಣ್ಣಿಮೆಯಂದು ರಕ್ಷಾಬಂಧನ ಆಚರಣೆ ನಡೆಯುತ್ತದೆ. ಐತಿಹಾಸಿಕವಾಗಿಯೂ, ರಕ್ಷಾಬಂಧನಕ್ಕೆ ಮಹತ್ವದ ಸ್ಥಾನವಿದ್ದು, ತನ್ನ ರಕ್ಷಣೆ ಮಾಡಬೇಕು ಎಂದು ತಂಗಿ ಅಣ್ಣನಿಗೆ ರಾಖೀ ಕಟ್ಟುತ್ತಿದ್ದಳು. ಇದಕ್ಕೆ ಸಾಕ್ಷಿಯಾಗಿ, ಚಿತ್ತೂರಿನ ರಾಣಿ ಕರ್ಣವತಿ, ಮೊಘಲ್ ರಾಜ ಹುಮಾಯೂನ್‌ಗೆ ರಾಖೀಯನ್ನು ಕಳುಹಿಸಿದ್ದು, ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅದು ಹೊರತಾಗಿ ಪುರೂರವ, ಅಲೆಕ್ಸಾಂಡರ್ ಯುದ್ಧದ ಮೊದಲು ಅಲೆಕ್ಸಾಂಡರ್ ಪತ್ನಿ, ತನ್ನ ಗಂಡನಿಗೆ ಹಾನಿಯಾಗದಂತೆ ನೋಡಬೇಕು ಎಂದು ಪುರೂರವನಿಗೆ ರಾಖೀ ಕಳುಹಿಸಿದ್ದಳಂತೆ. ಅದರಂತೆ ಯುದ್ಧದಲ್ಲಿ ಪುರೂರವನ ಕೈ ಮೇಲಾದಾಗ ಆ ರಾಖೀ ಕೈಲಿದ್ದದ್ದು ನೆನಪಾಗಿದೆ ಎಂದು ಹೇಳಲಾಗುತ್ತಿದೆ. ತಂಗಿ, ಅಣ್ಣನ ಬಲಗೈಗೆ ರಾಖೀ ಕಟ್ಟಿ ಆತನ ಆಶೀರ್ವಾದ ಪಡೆಯುವುದು ರಕ್ಷಾಬಂಧನದ ಸಂಪ್ರದಾಯ. ಪ್ರತಿಯಾಗಿ ಅಣ್ಣ, ತಂಗಿಗೆ ಸಿಹಿ ಅಥವಾ ಹಣವನ್ನು ಕೊಡುವುದೂ ಇದೆ.
ಸಹೋದರ ಪ್ರೀತಿಯ ದ್ಯೋತಕವಾದ ರಕ್ಷಾಬಂಧನ, ಅಂದಿನಿಂದ ಇಂದಿನವರೆಗೂ, ಅನೂಚಾನವಾಗಿ ಬೆಳೆದು ಬಂದಿದೆ.
ಆಧುನಿಕ ಗಾಳಿ ಇದಕ್ಕೂ ಬೀಸಿದ್ದು, ಸಾಂಪ್ರದಾಯಿಕ ರಾಖೀಯ ಹೊರತಾಗಿ (ರೇಶೆ¾ ಎಳೆಗಳನ್ನು ನೂಲಿನಲ್ಲಿ
ಕಟ್ಟಿದ್ದು) ಮಾರುಕಟ್ಟೆಯಲ್ಲಿ ವರ್ಣರಂಜಿತ, ವೈವಿಧ್ಯಮಯ ರಾಖೀಗಳು ಮಾರಾಟವಾಗುತ್ತಿದೆ. ದಕ್ಷಿಣಕ್ಕಿಂತಲೂ
ಉತ್ತರ ಭಾರತದಲ್ಲಿ ರಾಖೀ ತಯಾರಿ ಉದ್ಯಮವಾಗಿಯೂ ಬೆಳೆದಿದೆ. ಆದರೆ ರಾಖೀ ಕಟ್ಟುವುದು ಯಾಂತ್ರಿಕ ಪ್ರಕ್ರಿಯೆಯಲ್ಲ.
ಅದು ಸಹೋದರತ್ವಕ್ಕೆ ಮಹತ್ವ ನೀಡುವ ದಿನ, ಅಣ್ಣ-ತಂಗಿ ಸಂಭ್ರಮಿಸುವ ದಿನ.
ರಕ್ಷಾಬಂಧನ ಎಲ್ಲರಿಗೂ ಶುಭ ತರಲಿ.
ರಕ್ಷಾಬಂಧನ ಎಲ್ಲರಿಗೂ ಶುಭ ತರಲಿ.

No comments:
Post a Comment