Wednesday, 21 August 2013

ಯುವ ಜನತೆಗೆ ವಿವೇಕಾನಂದರ ಆದರ್ಶಗಳು



ಸ್ವಾಮಿ ವಿವೇಕಾನಂದ(ನರೇಂದನಾಥ ದತ್ತ)(ಜನೇವರಿ 12 1863 ಜನನ) ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ,ಆಶಾವಾದ,ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ.ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 ಶಿರಾಷ್ಟ್ತ್ರೀಯ ಯುವ ದಿನಷಿವೆಂದು ಆಚರಿಸಲಾಗುತ್ತಿದೆ.

ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ.ತಂದೆ ವಿಶ್ವನಾಥ ದತ್ತ ತಾಯಿ ಭುವನೇಶ್ವರಿ ದೇವಿ.1863 ಜನೇವರಿ 12 ರಂದು ಕಲಕತ್ತೆಯಲ್ಲಿ ಜನನ.ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಹೆಸರು ಪಡೆದರು.ಇವರು ಕಲಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ತ್ರ ಅದ್ಯಯನ ಮಾಡಿದರು.


ಯೌವನವು ಒಂದು ಪರಮಾದ್ಬುತ ಸ್ಥಿತಿ.ಈ ಯೌವನ ಎಂಬ ಪದದಲ್ಲಿ ಏನಿದೆ.ಏನಿಲ್ಲ.? ಶಕ್ತಿ,ಬಲ.ತೇಜಸ್ಸು,ಹುಮ್ಮಸ್ಸು,ಸಾಹಸ,ರಭಸ,ಭರವಸೆ ಎಲ್ಲವೂ ಇದೆ.ಆದರೆ ಒಂದನ್ನು ಬಿಟ್ಟು,ಅದು ತಾಳ್ಮೆ,ವಿವೇಕ,ಅಂತಹ ಎಲ್ಲ ಯುವಶಕ್ತಿಯ ಎಲ್ಲ ಗುಣಗಳ ಜೊತೆಗೆ ವಿವೇಕ ಹೊಂದಿ ಆನಂದಭರಿತರಾಗಿ ಯೋಗಿಯಾಗಿ ಬಾಳಿದವರು ವಿವೇಕಾನಂದರು. ಅಂದು ಅವರು ನುಡಿದ ಮಾತುಗಳು ಇಂದಿಗೂ ಪ್ರಸ್ತುತ.ಹಾಗಾದರೆ ಕೆಲವು ಅವರ ನುಡಿಗಳನ್ನು ಮತ್ತೊಮ್ಮೆ ನೆನೆಯೋಣವಲ್ಲವೇ.?

1) ನಮ್ಮ ಪ್ರಥಮ ಕರ್ತವ್ಯವೇ ನಮ್ಮಲ್ಲಿ ಆತ್ಮನಂದನೆ ಇರಕೂಡದು.ನಾವು ಬದುಕಿನಲ್ಲಿ ಮುಂದುವರಿಯಬೇಕಾದರೆ ಮೊದಲು ನಮ್ಮಲ್ಲಿ ಆತ್ಮಶೃದ್ದೆ ಇರಬೇಕು.

2) ನಾವು ಯಾವುದಕ್ಕೆ ಯೋಗ್ಯರೋ ನಮಗೆ ಆ ಸ್ಥಳ ದೊರಕುತ್ತದೆ.ಪ್ರತಿಯೊಂದು ಗುಂಡಿಗೂ ಒಂದು ಗುರಿಯಿದ್ದಂತೆ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗುರಿ ಅವಶ್ಯಕ.ಯಾವುದೇ ಗುರಿ ತಲುಪಬೇಕಾದರೆ ನಮ್ಮ ಹಿಂದೆ ಗುರುವಿನ ಮಾರ್ಗದರ್ಶನವಿರಬೇಕು.ಮುಂದೆ ಗುರಿಯ ಕಡೆಗೆ ಸಾಗುವ ಪ್ರಯತ್ನವಿರಬೇಕು.ಆ ಗುರಿ ಒಳ್ಳೆಯದಾಗಿರಬೇಕು ಹೊರತು ಮತ್ತೊಬ್ಬರಿಗೆ ಕೇಡನ್ನು ಬಗೆಯುವಂತಾಗಿ ರಬಾರದು.

3) ನಾವು ಏನನ್ನು ಮಾಡುವುದಿಲ್ಲ.ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಕಂಡು ಹಿಡಿಯುತ್ತೇವೆ.ಇದು ನಮ್ಮ ಯುವಜನಾಂಗದ ಅಶಾಂತಿಗೆ ಕಾರಣ.ಅದನ್ನು ಬಿಡಿ ಎಲ್ಲರಿಗೂ ಅವಕಾಶವಿರಲಿ ಎಂಬ ಮನೋಭಾವ ತಾಳಿರಿ.

4) ಯುವಕರೇ ಓರ್ವ ಹಗಲು ರಾತ್ರಿ,ಷಿ ಅಯ್ಯೌ ನಾನು ದು:ಖಿ,ದೀನ. ಯಾವುದಕ್ಕೂ ಪ್ರಯೋಜನವಿಲ್ಲಷಿಎಂದು ಭಾವಿಸುತ್ತಿದ್ದರೆ ಅವನು ನಿಷ್ಪ್ತ್ರಯೋಜಕ ನಾಗುತ್ತಾನೆ.ನಾವೇ ಎಲ್ಲವನ್ನೂ ಏನನ್ನು ಬೇಕಾದರೂ ಮಾಡಲುಸಿದ್ದ.ಏನನ್ನೂ ಬೇಕಾದರೂ ಸಾಧಿಸಿಯೇ ತೀರುವೆವು ಎಂಬ ದೃಢ ವಿಶ್ವಾಸ ನಿಮ್ಮಲ್ಲಿ ಬೆಳೆಯಲಿ.

5) ತಾಯಿಯನ್ನು ಪೂಜಿಸದ ಪಾಪಿ ಯಾವನೊಬ್ಬನೂ ಕೀರ್ತಿವಂತನಾಗಿಲ್ಲ ಭರತಖಂಡದಲ್ಲಿ ಪೂಜ್ಯತಮಳಾದ ಮಾತೆಗೇ ಅಗ್ರಸ್ಥಾನ ದೊರೆತಿದೆ. ಮಾತೆಯೇ ದೇವರು ಎಂಬ ತಿಳುವಳಿಕೆ ಹೊಂದಿ.

6) ನಮಗೆ ಬೇಕಾಗಿರುವುದು ನಿಯಮದಲ್ಲಿ ನಾವು ನಿಯಮಾತೀತರಾಗಬೇಕು,ನಾವು ನಿಯಮಾತೀತರು ಎಂಬುದರ ಮೇಲೆ ಮಾನವ ಕೋಟಿಯ ಇತಿಹಾಸವೆಲ್ಲ ನಂತಿದೆ.

7) ವ್ಯಕ್ತಿಯಾಗಲಿ, ಜನಾಂಗ ವಾಗಲೀ,ಮತ್ತೊಬ್ಬರಿಂದ ಪ್ರತ್ಯೇಕವಾಗಿ ಬಹಳ ಕಾಲ ಬಾಳಲಾರದು.ಎಲ್ಲರೂ ಸುಖವಾಗಿರುವತನಕ ಯಾರೂ ಸುಖವಾಗಿರಲಾರರು.ಆದ್ದರಿಂದ ನಾವೆಲ್ಲ ಒಂದೇ ಎಂಬ ಐಕ್ಯಮಂತ್ರವನ್ನು ಹೇಳಿರಿ.ವಿಕಾಸವೇ ಜೀವನ,ಸಂಕೋಚವೇ ಮರಣ.ಪ್ರೀತಿಯೇ ಜೀವನ,ದ್ವೇಷವೇ ಮರಣಷಿಎಂಬುದನ್ನು ಅರಿಯಿರಿ.
8) ಏಳಿರಿ,ಕಾರ್ಯೋನ್ಮುಖರಾಗಿರಿ ಈ ಬದುಕಾದರೂ ಎಷ್ಟು ದಿನ,ಮಾನವರಾಗಿ ಹುಟ್ಟಿದ ಮೇಲೆ ಎನನ್ನಾದರೂ ಸಾಧಿಸಿ.
9) ಜೀವನವೊಂದು ಗರಡಿಮನೆ,ಇಲ್ಲಿ ಬಲಿಷ್ಠರಾಗಲು ಬಂದಿದ್ದೇವೆ.
10) ಮನದೊಳಗಿನ ಪುಸ್ತಕ ತೆರೆಯದ ಹೊರತು ಎಷ್ಟು ಪುಸ್ತಕ ಓದಿದರೂ ವ್ಯರ್ಥವೇ.
11) ನಿಮ್ಮ ಯೋಜನೆಯಂತೆಯೇ ನೀವು, ನೀವೊಬ್ಬ ಋುಷಿ ಎಂದು ಭಾವಿಸಿದರೆ ಋುಷಿಯೇ ಆಗಿರುತ್ತೀರಿ.
12) ಎಲ್ಲ ಕಾರ್ಯಕ್ಷೇತ್ರಗಳಲ್ಲೂ ನೀವು ದಕ್ಷತೆಯುಳ್ಳವರಾಗಿರಬೇಕು.ಮಣಗಟ್ಟಲೆ ಸಿದ್ದಾಂತಗಳ ಗೊಂದಲದಿಂದಾಗಿ ರಾಷ್ಟ್ತ್ರಕ್ಕೆ ರಾಷ್ಟ್ತ್ರವೇ ಇಂದು ಹಾಳುಬಡಿದುಕೊಂಡಿದೆ.ನಾವು ಮಾಡುವ ಕೃತ್ಯಗಳಲ್ಲಿ ಸಂಭವಿಸಬಹುದಾದ ದೋಷ-ತಪ್ಪು ಎಂಬುವುಗಳೇ ನಮಗೆ ಪಾಠ ಕಲಿಸುವಂಥವು.ನಾಯಕನಲ್ಲಿ ಚಾರಿತ್ರ್ಯವಿಲ್ಲದಿದ್ದರೆ ಅನುಯಾಯಿಗಳಲ್ಲಿ ಸ್ವಾಮಿನಿಷ್ಠೆ ಇರುವುದಿಲ್ಲ.
13)ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು ಹೃದಯ, ನಿಮ್ಮ ಸರ್ವಸ್ವವನ್ನೂ ಆಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಆಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು.
14)ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
15)ಕಷ್ಟವೂ ಬಡತನವೂ, ಬೋಧಿಸುವಂತೆ ಬೇರೆ ಯಾವುದೂ ಬೋಧಿಸಲಾರದು.
16)ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸಿದವರಾಗುತ್ತಾರೆ.
17)ತಾಳ್ಮೆಯಿಂದ ಕಾಯುವುದೇ ಯಶಸ್ಸಿನ ಗುಟ್ಟು.
18)ನಾವು ನಮ್ಮನ್ನೇ ಅಲಕ್ಷಿಸದಿರುವುದು ನಮ್ಮ ಮೊದಲ ಕರ್ತವ್ಯ.
19)ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಗತಿಯ ಮೊದಲ ಗುರುತು ಸದಾ ಹಸನ್ಮುಖಿಯಾಗಿರುವುದು!
20)ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!
21)ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು.
22)ವಿಕಾಸವೇ ಜೀವನ;ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ,ಸ್ವಾರ್ಥವೆಲ್ಲಾ ಸಂಕೋಚ. ಆದ್ದರಿಂದ ಪ್ರೇಮವೇ ಬದುಕಿನ ಧರ್ಮ.
23)ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ.ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ. 
24)ಇದೊಂದು ದೊಡ್ಡ ಸತ್ಯ; ಶಕ್ತಿಯೇ ಜೀವನ, ದುರ್ಬಲತೆಯೇ ಮರಣ; ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ.
25)ತಮ್ಮನ್ನು ಸರಿಪಡಿಸಿಕೊಂಡವರು ಪ್ರಪಂಚವನ್ನು ಸರಿಪಡಿಸಿದವರಾಗುತ್ತಾರೆ.




-ಸಂಗ್ರಹ 




ಸೋದರತೆಯನ್ನು ಸೂಚಿಸುವ ಹಬ್ಬ ರಕ್ಷಾ ಬಂಧನ...


ಅಣ್ಣ-ತಂಗಿ ಭಾವನೆಯನ್ನು ಗಟ್ಟಿಗೊಳಿಸುವ ಈ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಹಿಂದೂ ಪಂಚಾಂಗದ ಪ್ರಕಾರ ನೂಲ ಹುಣ್ಣಿಮೆಯಂದು ರಕ್ಷಾಬಂಧನ ಆಚರಣೆ ನಡೆಯುತ್ತದೆ. ಐತಿಹಾಸಿಕವಾಗಿಯೂ, ರಕ್ಷಾಬಂಧನಕ್ಕೆ ಮಹತ್ವದ ಸ್ಥಾನವಿದ್ದು, ತನ್ನ ರಕ್ಷಣೆ ಮಾಡಬೇಕು ಎಂದು ತಂಗಿ ಅಣ್ಣನಿಗೆ ರಾಖೀ ಕಟ್ಟುತ್ತಿದ್ದಳು. ಇದಕ್ಕೆ ಸಾಕ್ಷಿಯಾಗಿ, ಚಿತ್ತೂರಿನ ರಾಣಿ ಕರ್ಣವತಿ, ಮೊಘಲ್‌ ರಾಜ ಹುಮಾಯೂನ್‌ಗೆ ರಾಖೀಯನ್ನು ಕಳುಹಿಸಿದ್ದು, ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅದು ಹೊರತಾಗಿ ಪುರೂರವ, ಅಲೆಕ್ಸಾಂಡರ್‌ ಯುದ್ಧದ ಮೊದಲು ಅಲೆಕ್ಸಾಂಡರ್‌ ಪತ್ನಿ, ತನ್ನ ಗಂಡನಿಗೆ ಹಾನಿಯಾಗದಂತೆ ನೋಡಬೇಕು ಎಂದು ಪುರೂರವನಿಗೆ ರಾಖೀ ಕಳುಹಿಸಿದ್ದಳಂತೆ. ಅದರಂತೆ ಯುದ್ಧದಲ್ಲಿ ಪುರೂರವನ ಕೈ ಮೇಲಾದಾಗ ಆ ರಾಖೀ ಕೈಲಿದ್ದದ್ದು ನೆನಪಾಗಿದೆ ಎಂದು ಹೇಳಲಾಗುತ್ತಿದೆ. ತಂಗಿ, ಅಣ್ಣನ ಬಲಗೈಗೆ ರಾಖೀ ಕಟ್ಟಿ ಆತನ ಆಶೀರ್ವಾದ ಪಡೆಯುವುದು ರಕ್ಷಾಬಂಧನದ ಸಂಪ್ರದಾಯ. ಪ್ರತಿಯಾಗಿ ಅಣ್ಣ, ತಂಗಿಗೆ ಸಿಹಿ ಅಥವಾ ಹಣವನ್ನು ಕೊಡುವುದೂ ಇದೆ.
ಸಹೋದರ ಪ್ರೀತಿಯ ದ್ಯೋತಕವಾದ ರಕ್ಷಾಬಂಧನ, ಅಂದಿನಿಂದ ಇಂದಿನವರೆಗೂ, ಅನೂಚಾನವಾಗಿ ಬೆಳೆದು ಬಂದಿದೆ. ಆಧುನಿಕ ಗಾಳಿ ಇದಕ್ಕೂ ಬೀಸಿದ್ದು, ಸಾಂಪ್ರದಾಯಿಕ ರಾಖೀಯ ಹೊರತಾಗಿ (ರೇಶೆ¾ ಎಳೆಗಳನ್ನು ನೂಲಿನಲ್ಲಿ ಕಟ್ಟಿದ್ದು) ಮಾರುಕಟ್ಟೆಯಲ್ಲಿ ವರ್ಣರಂಜಿತ, ವೈವಿಧ್ಯಮಯ ರಾಖೀಗಳು ಮಾರಾಟವಾಗುತ್ತಿದೆ. ದಕ್ಷಿಣಕ್ಕಿಂತಲೂ ಉತ್ತರ ಭಾರತದಲ್ಲಿ ರಾಖೀ ತಯಾರಿ ಉದ್ಯಮವಾಗಿಯೂ ಬೆಳೆದಿದೆ. ಆದರೆ ರಾಖೀ ಕಟ್ಟುವುದು ಯಾಂತ್ರಿಕ ಪ್ರಕ್ರಿಯೆಯಲ್ಲ. ಅದು ಸಹೋದರತ್ವಕ್ಕೆ ಮಹತ್ವ ನೀಡುವ ದಿನ, ಅಣ್ಣ-ತಂಗಿ ಸಂಭ್ರಮಿಸುವ ದಿನ.
ರಕ್ಷಾಬಂಧನ ಎಲ್ಲರಿಗೂ ಶುಭ ತರಲಿ.

"ಪ್ರೀತಿ"



"ಪ್ರೀತಿ" ಎಂಬುದು ಬರಿ ಎರಡೇ ಅಕ್ಷರಗಳು ?. ಆದರೆ ಇದರೊಳಗಿನ ಅಗಾಧ ಶಕ್ತಿಯನ್ನು ಕಲ್ಪಿಸಿಕೊಳ್ಳುವುದು ಕಷ್ಟದ ಕೆಲಸವೇ ಅನ್ನಿ. ಸಾವಿಗೂ ಮತ್ತು ಬದುಕಿನ ಮಧ್ಯೆ ಇದರ ಪಾತ್ರ ಬಹಳಷ್ಟಿದೆ ಎನ್ನಬಹುದು. ಪ್ರೀತಿಯಿಲ್ಲದ ಸ್ಥಳವಿಲ್ಲ ಪ್ರೀತಿಯಿಲ್ಲದ ಜಗವಿಲ್ಲ. .ಸಲೀಂ ಅನಾರ್ಕಲಿಯಿಂದಿಡಿದು. ದೇವದಾಸು ಪಾರ್ವತಿಯ ತನಕ ಚರಿತ್ರೆಯ ಪುಟಗಳನ್ನು ಬಿಚ್ಚಿ ತೋರಿಸುತ್ತದೆ. ಪ್ರೀತಿ ಎಂಬುದು ತಾಯಿ ಮಗುವಿನಿಂದ ಹಿಡಿದು ಸಖಲ ಜೀವಜಗತ್ತಿಗೂ ಅನ್ವಯವಾಗುತ್ತದೆ. ಪ್ರೀತಿಯಿಲ್ಲದಿದ್ದಲ್ಲಿ ಈ ಜಗವು ಶೂನ್ಯವೆಂಬಂತೆಗೋಚರಿಸುತ್ತದೆ ಇದರ ಅಗಾಧತೆಯನ್ನಯ ಅರಿಯುವುದು ಸಾಮಾನ್ಯವಲ್ಲ. ಎಲ್ಲೋ ಇದ್ದ ಎರಡು ಹೃದಯಗಳನ್ನು ಬೆಸೆಯುವಂತೆ ಮಾಡುವುದು, ಎಲ್ಲರನ್ನೂ ನಿರ್ಧಾಕ್ಷಣ್ಯವಾಗಿ ತೊರೆದು ಎರಡು ಕುಂಟುಂಗಳ ನಡುವೆ ಕಲಹವಾಗುವಂತೆ ಮಾಡುವುದು ಈ ಪ್ರೀತಿಯ ಕಾರಣಕ್ಕಾಗಿಯೇ. ಪ್ರಿಯತಮನನ್ನು ಕಳೆದುಕೊಂಡು ಅವನ ನೆನಪಲ್ಲಿ ನೊಂದು ಬೆಂದು ಕೊನೆಯಾಗುವಂತೆ ಮಾಡುವುದು ಇದೇ ಪ್ರೀತಿಯೇ.

ಆದರೆ ನಿಜವಾದ ಪ್ರೀತಿಗೆ ಒಂದು ಮಹತ್ವವಿದೆ ಮನ್ನಣೆಯಿದೆ. ತಾಯಿ ತನ್ನ ಮಗುವನ್ನು ಕಣ್ಣರೆಪ್ಪೆಯಂತೆ ಸಲಹುತ್ತಾಳೆ ಅದು ಶುದ್ಧ ಪ್ರೀತಿ ಎನ್ನಬಹುದು. ಆದರೆ ಅದೇ ತಾಯಿಯನ್ನು ನಡುರಸ್ತೆಯಲ್ಲೋ ಅನಾಥಾಲಯದಲ್ಲೋ ಬಿಟ್ಟುಸಾಗುವಂಥ ಸಾಕಷ್ಟು ನಿದರ್ಶನಗಳನ್ನು ಕಾಣಬಹುದಿದೆ. ಇದು ಯಾವ ರೀತಿಯ ಪ್ರೀತಿಯೋ ಹೇಳುವುದಕ್ಕೆ ಕಷ್ಟವಾಗುತ್ತದೆ. ಕೆಲವರಿಗೆ ಈ ಪ್ರೀತಿ ಬರಿ ಆಕರ್ಷಣೆಯ ಪ್ರತೀಕವಾಗಿರುತ್ತದೆ. ಇದರ ಆಳವನ್ನು ಕೆದಕಿನಿಂತಾಗ ಅಲ್ಲೊಂದು ಅಂತ್ಯ ಸಂಭವಿಸಿರುತ್ತೆ. ಇದೇ ಪ್ರೀತಿಯ ಕಾರಣಕ್ಕಾಗಿ ಸಾಕಷ್ಟು ಮಂದಿ ಪ್ರಾಣಕೊಟ್ಟವರೂ ಇದ್ದಾರೆ. ಇದೇ ಪ್ರೀತಿಯಲ್ಲಿ ಜಯಗಳಿಸಿ ಬಾಳುತ್ತಿರುವವರು ಇದ್ದಾರೆ. ಖಂಡಿತ ಪ್ರೀತಿ ಮಾಡುವುದು ಅಪರಾಧವಲ್ಲ ಆದರೆ ಮುಂದೆ ಸಂಭವಿಸುವ ತೊಡಕುಗಳು ತೊಂದರೆಗಳನ್ನು ಮೆಟ್ಟಿನಿಲ್ಲುವುದು ಅಷ್ಟು ಸುಲಭದ ಮಾತಲ್ಲ. ಆದರೂ ನಂಬಿಕೆಯಿಂದ ನಡೆದು ಕನಸುಗಳಿಗೆ ರೆಟ್ಟಿಕಟ್ಟಿಕೊಂಡು ಹಾರುವವರಿದ್ದಾರೆ. ಕಷ್ಟವೋ ಸುಖವೋ ಒಟ್ಟಿನಲ್ಲಿ ಬಾಳುತ್ತೇವೆ ಎನ್ನುವವರೂ ಇದ್ದಾರೆ. ಈ ಜಗತ್ತಿನಲ್ಲಿ ನಿಜವಾದ ಪ್ರೀತಿಗೆ ಎಂದೂ ಸೋಲಿಲ್ಲ. ಪ್ರೀತಿಗೊಂದು ಶಕ್ತಿಯಿದೆ ಅದು ಯಾರ ಮೇಲೆ ಯಾವ ರೀತಿಯಲ್ಲಾದರೂ ಹುಟ್ಟಬಹುದು. ಹುಟ್ಟಿದ ಪ್ರೀತಿಯನ್ನು ಅವಲೋಕಿಸಿ ವಾಸ್ತವದ ಅರ್ಥವನ್ನು ಅರಿವಾಗುವಂತೆ ತಿಳಿಸುವುದು ಒಳ್ಳೆಯದು. ಹಾಗೇ ಪ್ರೀತಿಯ ಒಳ ಹೊರ ಅಂಥರವನ್ನು ಇಬ್ಬರೂ ಪರಸ್ಪರವಾಗಿ ತಿಳಿದುಕೊಳ್ಳಬೇಕಾಗುವುದು ಮುಖ್ಯ ಎಂಬುದು ಹಲವರ ಅಂಬೋಣ.

ಮುಂದಿನ ಬದುಕು-ಭವಣೆಯ ಬಗ್ಗೆ ಮೊದಲೇ ನಿರ್ಧರಿಸಿ ಒಂದು ಯೋಜನೆಯನ್ನು ಸಿದ್ದಪಡಿಸಿಕೊಂಡು ಮುನ್ನಡೆದರೆ ಒಳ್ಳೆಯದು. ಈಗಿನ ಕಾಲದಲ್ಲಿ ಈ ಪ್ರೀತಿ ಒಂದು ಫ್ಯಾಷನ್ ವಸ್ತುವಾಗಿ ಮಾರ್ಪಡುತ್ತಿದೆ. ಯಾವುದೋ ನೋಟ ಮತ್ಯಾವುದೋ ಮಾತು ಮತ್ಯಾರನ್ನೋ ಕಟ್ಟಿನಿಲ್ಲಿಸುತ್ತದೆ. ದಾರಿಯಲ್ಲಿ ಕಲ್ಲು ಮುಳ್ಳುಗಳಿವೆ ಎನ್ನುವುದರ ಅರಿವೂ ಸಹ ಇಲ್ಲದೇನೆಯೇ ನೋಟಗಳು ಒಂದಾಗಿಬಿಡುತ್ತವೆ. ಬದುಕು ಬರಿ ಭ್ರಮೆಯ ರೂಪವಾಗಬಾರದು. ಎರಡು ನಿಮಿಷದ ಕಣ್ಣೋಟ ಯಾವುದೇ ಅಂತ್ಯಕ್ಕೆ ದಾರಿಯಾಗಕೂಡದು. ಯಾರಿಗೂ ತಿಳಿಸದಂತೆ ಓಡಿಹೋಗುವುದು. ಉತ್ತಮ ವ್ಯಕ್ತಿತ್ವವದ ಲಕ್ಷಣವಲ್ಲ. ಪರಿಸ್ಥಿತಿಯ ಬಗ್ಗೆ ಅರಿವಿರಬೇಕು ಎರಡು ಕುಟುಂಬಗಳ ಮುಂದಿನ ಸ್ಥಿತಿ ಗತಿಯ ಬಗ್ಗೆ ಮನವರಿಕೆಯಿರಬೇಕು. ವರ್ಷಗಳ ಕಾಲ ಸಾಕಿ ಸಲುಹಿದ ತಂದೆ ತಾಯಿಯರಿಗೂ ತಿಳಿಸದೆ ಬಿಟ್ಟುಹೋಗುವುದು ಅವಿವೇಕಿತನವಲ್ಲದೆ ಮತ್ತೇನು?. ಸಾಧ್ಯವಾದಷ್ಟು ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಪಾಲಕರಿಗೆ ಮನದಟ್ಟು ಮಾಡಿಕೊಡಬೇಕು. ಸಮಾಜ ಎಷ್ಟು ಶಿಕ್ಷಣವನ್ನು ಪಡೆಯುತ್ತಿದೆಯೋ ಅದಕ್ಕೆ ಎರಡರಷ್ಟು ಜಾತಿ ವ್ಯವಸ್ತೆಗೆ ಅಂಟಿಕೊಳ್ಳುತ್ತಿದೆ. ಇದರಿಂದ ವರದಕ್ಷಣೆ ಅನಾಚಾರಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇಂಥ ವಿಷಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವವರು ಸುಶಿಕ್ಷಕರೇ ಎನ್ನಬುದು, ಅದರಂತೆ ಜಾತಿಯ ಬೇರುಗಳು ಬಹಳ ಆಳವಾಗಿ ಹೂತುಬಿಟ್ಟಿವೆ. ಈ ಬೇರಿನ ಮೂಲವನ್ನು ಹುಡುಕುತ್ತಾ ಸಾಗುವುದು ದಡ್ಡತನವಲ್ಲದೆ ಬೇರೇನು ಇಲ್ಲ.

ಸಭೆ ಸಮಾರಂಭಗಳಲ್ಲಿ ಜಾತಿಯತೆಯನ್ನು ಮೆಟ್ಟಿನಿಲ್ಲುವಂಥ ಜನನಾಯಕರು ಸಂಜೆಯಾದಕೂಡಲೇ ತಮ್ಮ ವರಸೆಯನ್ನು ಬದಲಿಸಿಬಿಡುತ್ತಾರೆ. ಅವರೂ ಸಹ ಕಟ್ಟುಪಾಡುಗಳಿಗೆ ಸಿಕ್ಕಿ ನಲುಗುತ್ತಿರುತ್ತಾರೆ. ಅಂತರ್ಜಾತಿ ವಿವಾಹಗಳಿಗೆ ಅವರು ಸುತರಾಂ ಒಪ್ಪುವುದಿಲ್ಲ. ಆದರೂ ಪರಿಸ್ಥಿತಿಯ ವಾಸ್ತವವನ್ನು ವಿವರಿಸುವುದು ಉತ್ತಮ ಲಕ್ಷಣ. ನಾಳೆ ಅದು ಮತ್ತೊಂದು ಅಂತ್ಯಕ್ಕೆ ನಾಂದಿಯಾಗದಿರಬೇಕಲ್ಲವೆ. ಒಂದು ವೇಳೆ ಇವರು ಒಪ್ಪದಿದ್ದಲ್ಲಿ ಮುಂದಿನ ಬೆಳವಣಿಗೆಗೆ ಅವರಿಬ್ಬರೆ ಸೀಮಿತವಾಗುವುದು ಸರಿಯಲ್ಲ. ಸಮಾಜವನ್ನು ತಿದ್ದುವಂತ ಕ್ರಿಯೆಯಲ್ಲಿ ಎಲ್ಲರ ಪಾತ್ರ ಬಹಳಷ್ಟಿದೆ. ಸಜಾಜ ಚಿಂತಕರು ಬುದ್ದಿ ಜೀವಿಗಳು ಮೂಡ ಮನಗಳ ಪರಿವರ್ತನೆತ್ತ ಶ್ರಮವಹಿಸಬೇಕಿದೆ. ಎಲ್ಲಾ ಪ್ರೀತಿಯೂ ಮೊಗ್ಗಾಗಿ ಅರಳುವುದಿಲ್ಲ. ಎಲ್ಲರ ಹೃದಯದಲ್ಲೂ ಅಣತೆ ಬೆಳಗುವುದಿಲ್ಲ. ಆದ್ದರಿಂದ ಬಾಳ ಸಂಗಾತಿಯ ಆಯ್ಕೆಯಲ್ಲಿ ಇಬ್ಬರಲ್ಲೂ ಜಾಗರೂಕತೆಯಿರಬೇಕು. ಮುಂದಿನ ಭವಿಷ್ಯಕ್ಕೆ ಅದುವೇ ಮೆಟ್ಟಿಲುಗಳಂತಿರಬೇಕು. ಮುಂದಿನ ಬೆಳವಣಿಗೆಗೆ ಅದು ಮೆಟ್ಟಿಲಾಗುವಂತಿರಬೇಕು. ಪರಸ್ಪರ ಕೂಡಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದು ಸೂಕ್ತ. ಜೀವನದ ಹೆಜ್ಜೆಗಳನ್ನಿಡುವ ಸಂದರ್ಭದಲ್ಲಿ ಅಪ್ಪಿ ತಪ್ಪಿ ತಪ್ಪು ಹೆಜ್ಜೆಯನ್ನಿಟ್ಟಲ್ಲಿ ಅಂಥ ಪ್ರೀತಿಯನ್ನು ಉಳಿಸಿಕೊಳ್ಳುವುದು ಬಹಳಷ್ಟು ಕಷ್ಟ. ಅದರಂತೆ ಈ ಪ್ರೀತಿ ಯಾವತ್ತೂ ಶಾಶ್ವತವಾಗಿರಬೇಕೆ ವಿನಹಃ ಮತ್ತೊಬ್ಬರ ಕೈಗೊಂಬೆಯಂತಾಗಕೂಡದಲ್ಲವೆ ?.

-ಸಂಗ್ರಹ 
 

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...