Wednesday, 21 August 2013

ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?



ಕುಂಕುಮವು ಪಾವಿತ್ರ್ಯದ ಮತ್ತು ಮಾಂಗಲ್ಯದ ಪ್ರತೀಕವಾಗಿದೆ. ಕೃತಕ ವಸ್ತುಗಳಿಗಿಂತ ನೈಸರ್ಗಿಕ ವಸ್ತುಗಳಲ್ಲಿ ದೇವತೆಗಳ ಚೈತನ್ಯಲಹರಿಗಳನ್ನು ಸೆಳೆದುಕೊಳ್ಳುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುತ್ತದೆ. ಕುಂಕುಮವನ್ನು ಅರಿಶಿನದಿಂದ ತಯಾರಿಸಿರುವುದರಿಂದ ಟಿಕಲಿಗಿಂತ ಕುಂಕುಮವು ಹೆಚ್ಚು ನೈಸರ್ಗಿಕವಾಗಿದೆ, ಅಲ್ಲದೇ ಕುಂಕುಮದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಪರಿಮಳದಲ್ಲಿ ಬ್ರಹ್ಮಾಂಡದಲ್ಲಿನ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆಯಿರುವುದರಿಂದ ಕುಂಕುಮವು ತಾರಕ-ಮಾರಕ ಚೈತನ್ಯಲಹರಿಗಳನ್ನು ಪ್ರಕ್ಷೇಪಿಸಿ ಜೀವವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಆದುದರಿಂದ ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು ಹಚ್ಚಿಕೊಳ್ಳುವುದು ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುವ ದೃಷ್ಟಿಯಿಂದ ಹೆಚ್ಚು ಫಲದಾಯಕವಾಗಿದೆ.


ಟಿಕಲಿಯ ಹಿಂಬದಿಯಲ್ಲಿ ಉಪಯೋಗಿಸಿದ ಅಂಟು ತಮೋಗುಣಿಯಾಗಿರುವುದರಿಂದ ಅದು ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುತ್ತದೆ. ಈ ಲಹರಿಗಳು ಜೀವದ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳುವುದರಿಂದ ಶರೀರದಲ್ಲಿನ ರಜ-ತಮ ಕಣಗಳ ಪ್ರಾಬಲ್ಯವು ಹೆಚ್ಚಾಗುತ್ತದೆ. ಸತತವಾಗಿ ಟಿಕಲಿಯನ್ನು ಹಚ್ಚಿಕೊಳ್ಳುವುದರಿಂದ ಆ ಸ್ಥಳದಲ್ಲಿ ಕೆಟ್ಟಶಕ್ತಿಗಳ ಸ್ಥಾನವು ನಿರ್ಮಾಣವಾಗುವ ಸಾಧ್ಯತೆಯಿರುತ್ತದೆ.

(ಈ ಶಾಸ್ತ್ರದ ಮಾಹಿತಿಯಿಲ್ಲದಿರುವುದರಿಂದ ಮತ್ತು ಹಿಂದೂ ಧರ್ಮದಲ್ಲಿನ ಮಂಗಲಕರ ವಿಷಯಗಳೆಡೆಗೆ ನೋಡುವ ಆಸಕ್ತಿಯೂ ಇಲ್ಲದಿರುವುದರಿಂದ ಇತ್ತೀಚೆಗೆ ಸ್ತ್ರೀಯರು ಹಾಗೂ ಯುವತಿಯರು ಕುಂಕುಮವನ್ನು ಹಚ್ಚಿಕೊಳ್ಳುವುದರ ಬದಲು ಟಿಕಲಿಯನ್ನು ಉಪಯೋಗಿಸುತ್ತಿದ್ದಾರೆ.)


-ಸಂಗ್ರಹ 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕರ್ನಾಟಕದ ನಂಬರ್ಒನ್ ಶ್ರೀಮಂತ ದೇವಸ್ಥಾನ




ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವಒಟ್ಟು 34,217 ದೇವಸ್ಥಾನಗಳಿವೆ. ಅವುಗಳಲ್ಲಿಆದಾಯ ಗಳಿಕೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲವಾರ್ಷಿಕ ಆದಾಯ 44.8225 ಕೋಟಿ ರೂ.ಬೇರೆಮುಜರಾಯಿ ದೇವಸ್ಥಾನಗಳಿಗೆ ಹೋಲಿಸಿದರೆಬರುವ ಭಕ್ತರ ಸಂಖ್ಯೆಯೂ ಅತ್ಯಧಿಕ.
'ದೇವಸ್ಥಾನಕ್ಕೆ ಪ್ರತಿದಿನ ಅಂದಾಜು 2ರಿಂದ 5ಸಾವಿರ ಭಕ್ತರು ದರ್ಶನಕ್ಕೆ ಬರುತ್ತಾರೆ. ಇಲ್ಲಿಸೇವೆ ಮತ್ತು ಹುಂಡಿ ರೂಪದಲ್ಲಿ ಹೆಚ್ಚಿನ ಹಣಸಂಗ್ರಹವಾಗುತ್ತಿದೆ. ತಿಂಗಳಿಗೆಅಂದಾಜು 50ರಿಂದ 60 ಲಕ್ಷ ರೂ. ಕಾಣಿಕೆಬರುತ್ತದೆ' ಇನ್ನು ರಾಜ್ಯದ2ನೇ ಶ್ರೀಮಂತ ಪುಣ್ಯಕ್ಷೇತ್ರಕೊಳ್ಳೆಗಾಲದ ಮಲೆ ಮಹದೇಶ್ವರ ಸ್ವಾಮಿ. ಈಕ್ಷೇತ್ರದ ಆದಾಯ 26.5021 ಕೋಟಿ ರೂ.ಶ್ರೀಮಂತಿಕೆಯಲ್ಲಿ 3ನೇ ಸ್ಥಾನದಲ್ಲಿರುವಮುಜರಾಯಿ ದೇವಸ್ಥಾನ ಕುಂದಾಪುರದಶ್ರೀ ಕೊಲ್ಲೂರು ಮೂಕಾಂಬಿಕೆ.
ಈ ದೇವಳದವಾರ್ಷಿಕ ಆದಾಯ 17.4844 ಕೋಟಿ ರೂ.ಇನ್ನೂ ಸಂಪತ್ತು ಗಳಿಕೆಯಲ್ಲಿ 4ನೇ ಸ್ಥಾನದಕ್ಷಿಣ ಕನ್ನಡ ಜಿಲ್ಲೆಕಟೀಲು ಶ್ರೀ ದುರ್ಗಾ ಪರಮೇಶ್ವರಿದೇವಸ್ಥಾನ. ಈ ತೀರ್ಥಕ್ಷೇತ್ರದ ಆದಾಯ10.07,89 ಕೋಟಿ ರೂ.ಶ್ರೀಮಂತ ಪಟ್ಟಿಯಲ್ಲಿ5ನೇ ಸ್ಥಾನದಲ್ಲಿ ಮೈಸೂರಿನಶ್ರೀ ಚಾಮುಂಡೇಶ್ವರಿ ದೇವಾಲಯವಿದೆ. ಇದರ
ಒಟ್ಟು ಸಂಪಾದನೆ 10.0874 ಕೋಟಿ ರೂ.ಹಾಗೆಯೇ 6ನೇ ಶ್ರೀಮಂತ ದೇವಳನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿದೇವಸ್ಥಾನ. ಈ ಪುಣ್ಯಕ್ಷೇತ್ರದ ಆದಾಯ9.8060 ಕೋಟಿ ರೂ. ಆ ಬಳಿಕ
7ನೇ ಕೋಟಾಧಿಪತಿ ಕ್ಷೇತ್ರ ಸವದತ್ತಿಯಯಲ್ಲಮ್ಮನಗುಡ್ಡ ಶ್ರೀ ರೇಣುಕ ಯಲ್ಲಮ್ಮದೇವಸ್ಥಾನ. ಈ ದೇವಸ್ಥಾನ ಸಂಪಾದನೆ7.89,80 ಕೋಟಿ ರೂ.ನಂತರದ ಸ್ಥಾನದಲ್ಲಿಉಡುಪಿ ಮಂದರ್ತಿಯ ಶ್ರೀ ದುರ್ಗಾ ಪರಮೇಶ್ವರಿದೇವಸ್ಥಾನವಿದೆ. ಇದರ ಆದಾಯ 3.8170ಕೋಟಿ ರೂ.ಇನ್ನು 3.73,39 ಕೋಟಿ ರೂ.
ಆದಾಯದೊಂದಿಗೆ ಬೆಂಗಳೂರಿನ ಶ್ರೀ ಬನಶಂಕರಿದೇವಸ್ಥಾನ 9ನೇ ಸ್ಥಾನದಲ್ಲಿದೆ.
ಕೊನೆಯದಾಗಿ ಕೊಪ್ಪಳದ ಶ್ರೀ ಹುಲಿಗಮ್ಮದೇವಸ್ಥಾನ 1.76,87 ಕೋಟಿಸಂಪಾದನೆಯೊಂದಿಗೆ 10ನೇ ಸ್ಥಾನದಲ್ಲಿದೆ.ಈಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆಆಯುಕ್ತ ಬಿ.ಎನ್. ಕೃಷ್ಣಯ್ಯ 'ರಾಜ್ಯದಲ್ಲಿಒಟ್ಟು 34 ಸಾವಿರಕ್ಕೂ ಹೆಚ್ಚು ಮುಜರಾಯಿದೇವಸ್ಥಾನಗಳಿವೆ. ಆದಾಯ ಗಳಿಕೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲಸ್ಥಾನದಲ್ಲಿದೆ. ಆಯಾ ದೇವಸ್ಥಾನಗಳಆದಾಯ ಗಳಿಕೆ ಮೇಲೆಅವುಗಳನ್ನು ವರ್ಗೀಕರಿಸಲಾಗಿವೆ'ಎಂದು ಹೇಳಿದ್ದಾರೆ.'25 ಲಕ್ಷ ರೂ.ಮತ್ತು ಅದಕ್ಕಿಂತ ಹೆಚ್ಚಿನ ಆದಾಯವಿರುವದೇವಸ್ಥಾನಗಳನ್ನು 'ಎ' ಪಟ್ಟಿಗೆ ಸೇರಿಸಿದ್ದು,ಅಂತಹ 110 ದೇವಸ್ಥಾನಗಳಿವೆ.ಹಾಗೆಯೇ 5ರಿಂದ 25 ಲಕ್ಷ ರೂ. ಆದಾಯ ಗಳಿಕೆಪುಣ್ಯಕ್ಷೇತ್ರಗಳನ್ನು 'ಬಿ'ಪಟ್ಟಿಗೆ ಸೇರಿಸಿದ್ದು,ಅಂತಹ 175 ದೇವಸ್ಥಾನಗಳಿಗೆ. 5 ಲಕ್ಷಕ್ಕಿಂತಕಡಿಮೆ ಆದಾಯ ಬರುವ ದೇವಸ್ಥಾನಗಳನ್ನು 'ಸಿ'ವಿಭಾಗಕ್ಕೆ ಸೇರಿಸಿದ್ದು, ಅವು ಒಟ್ಟು 33,932ದೇವಸ್ಥಾನಗಳಿಗೆ'ಎಂದು ಆಯುಕ್ತರು ತಿಳಿಸಿದ್ದಾರೆ.ಟಾಪ್ 10ರಲ್ಲಿ ಕರಾವಳಿ 4 ಪುಣ್ಯಕ್ಷೇತ್ರರಾಜ್ಯದ 10 ಶ್ರೀಮಂತ ದೇವಸ್ಥಾನಗಳಪಟ್ಟಿಯಲ್ಲಿ ಕರಾವಳಿ ಭಾಗದ ಒಟ್ಟು 4ದೇವಸ್ಥಾನಗಳಿವೆ. ಅಂದರೆ ಧಾರ್ಮಿಕವಾಗಿಅತಿಹೆಚ್ಚು ಆದಾಯ ಬರುವ ದೇವಸ್ಥಾನ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿವೆ.ಇನ್ನು ಖಾಸಗಿ ಒಡೆತನದಲ್ಲಿರುವದೇವಸ್ಥಾನಗಳಿಗೆ ಹೋಲಿಸಿದರೂ ಧರ್ಮಸ್ಥಳದ
ಶ್ರೀ ಮಂಜುನಾಥೇಶ್ವರ ಕೂಡ ರಾಜ್ಯದಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿಒಂದು. ಹೀಗಾಗಿ, ಕರ್ನಾಟಕದಲ್ಲಿಅತಿಹೆಚ್ಚು ಭಕ್ತಾದಿಗಳು ಈ ಎರಡು ಜಿಲ್ಲೆಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.


-ಸಂಗ್ರಹ 

ಅಂಕದ ಕೋಳಿಗಳ ಜಂಭದ ಕಾಳಗ :


ಕರಾವಳಿ ಜಿಲ್ಲೆ ಜಾನಪದ ಕಲೆ ಹಾಗೂ ಜಾನಪದ ಕ್ರೀಡೆಗಳ ತವರೂರು ಎಂದೇ ಹೇಳಬಹುದು. ಭೂತಕೋಲ, ಯಕ್ಷಗಾನ, ಹುಲಿ ಕುಣಿತ, ಮೊದಲಾದವುಗಳು ಇಲ್ಲಿನ ಜಾನಪದ ಕಲೆಗಳಾದರೆ, ಕಂಬಳ, ಕೆಸರುಗದ್ದೆ ಓಟ, ಕೋಳಿ ಅಂಕ ಇವು ಇಲ್ಲಿನ ಜಾನಪದ ಕ್ರೀಡೆಗಳಾಗಿವೆ.
ಜಾಗತೀಕರಣ, ನಗರೀಕರಣಗಳ ಬಿಸಿ ಗಾಳಿಯಿಂದ ಕೆಲವು ಜಾನಪದ ಕ್ರೀಡೆಗಳು ಮರೆ ಮಾಚುತ್ತಾ ಹೋದರೂ, ಕೆಲವೊಂದು ಕ್ರೀಡೆಗಳು ದಿನದಿಂದ ದಿನಕ್ಕೆ ಜನಪ್ರೀಯಗೊಳ್ಳುತ್ತಾ ಸಾಗುತ್ತಿವೆ. ಅವುಗಳಲ್ಲ್ಲಿಕೋಳಿ ಅಂಕ ಅಥವಾ ಕೋಳಿ ಕಾದಾಟದ ಆಟವು ಒಂದು. ತುಳು ಭಾಷೆಯಲ್ಲಿ ಇದನ್ನು ಕೋರಿ ಕಟ್ಟ ಎಂದು ಕರೆಯುತ್ತಾರೆ. ಬಲಿತ ಬಲಿಷ್ಠ ಹುಂಜ ಕೋಳಿಗಳ ಕಾಲಿಗೆ ಹರಿತವಾದ ಸಣ್ಣ ಕತ್ತಿ (ಬಾಲು)ಗಳನ್ನು ಕಟ್ಟಿ ಅವುಗಳನ್ನು ಹೋರಾಟಕ್ಕೆ ಬಿಡುವುದು. ಹುಂಜಗಳು ಕಾದಾಡುವಾಗ ಯಾವ ಹುಂಜ ತನ್ನ ಎದುರಾಳಿಯನ್ನು ಗಾಯಗೊಳಿಸಿ ಹೆಣವಾಗಿಸುವುದೋ ಆ ಹುಂಜ ವಿಜಯಿಯಾದಂತೆ. ಗೆದ್ದ ಹುಂಜದ ಮಾಲಿಕನಿಗೆ ಸೋತ ಹುಂಜದ ಭೂರೀ ಭೋಜನ. ಕೋಳಿ ಅಂಕದ ಗೆಲುವಿಗಾಗಿಯೇ ಅತೀ ಮುತುರ್ವರ್ಜಿವಹಿಸಿ ಕೋಳಿಯನ್ನು ಸಾಕುವುದು ಸಹಜವಾಗಿದೆ.
ಕರಾವಳಿ ತೀರದಲ್ಲಿ ಜಾತ್ರೆ, ನೇಮೋತ್ಸವ, ಅಥವಾ ಇನ್ನಿತರ ಕಾರ್ಯಕ್ರಮಗಳು ನಡೆದ ಮರುದಿನ ಈ ಕೋಳಿ ಅಂಕ ನಡೆಯುವುದು ಪ್ರತೀತಿಯಲ್ಲಿದೆ. ಹವ್ಯಾಸಕೋಸ್ಕರವೂ ನಡೆಯುವುದುಂಟು. ಹಿಂದೆ ಸಿಮಂತ ನಡೆಯುವ ಮನೆಯಲ್ಲಿ ಕೋಳಿ ಅಂಕ ನಡೆಸುವ ಪದ್ಧತಿ ಇತ್ತೆನ್ನಲಾಗಿದೆ. ಹಿರಿಯ ಮೂಡಬಿದಿರೆ ನಿವಾಸಿ ಆನಂದ ಅವರು ಹೇಳುವಂತೆ ಇವತ್ತಿನ ದಿನಗಳಲ್ಲಿ ಕೋಳಿ ಅಂಕ ಎನ್ನುವುದು ಫ್ಯಾಶನ್ ಆಗಿ ಹೋಗಿದೆ. ವಯಸ್ಸಿನ ಮಿತಿಯಿಲ್ಲ. ಇಲ್ಲಿ ಎಳೆ ಪ್ರಾಯದ ಯುವಕರೇ ಹೆಚ್ಚಾಗಿ ಕಾಣುತ್ತಿದ್ದಾರೆ. ಅದೂ ಅಲ್ಲದೆ ಇವತ್ತು ಮುಸ್ಲಿಂ ಕ್ರಿಶ್ಚಿಯನ್ ಎಂಬ ಬೇಧಭಾವವಿಲ್ಲದೆ ಹಲವರು ಈ ಕ್ರೀಡೆಗೆ ಪ್ರಭಾವಿತರಾಗಿದ್ದಾರೆ ಎಂದರೆ ಇದರ ಜನಪ್ರೀಯತೆ ತಿಳಿಯುತ್ತದೆ.

ಕೆಂಪು, ಬಿಳಿ, ಕಪ್ಪು ಹೀಗೆ ಹತ್ತು ಹಲವು ಬಣ್ಣ ಮತ್ತು ಜಾತಿಗಳಿದ್ದು, ಬಿಳಿ ಕೋಳಿಗಳೆಂದರೆ ಹೆಚ್ಚಿನವರಿಗೆ ಅಚ್ಚುಮೆಚ್ಚು. ಬೇಸಿಗೆ ಸೇರಿದಂತೆ ಮಳೆಗಾಲದಲ್ಲೂ ನಡೆಯುವ ಈ ಕ್ರೀಡೆಯ ಕಣಕ್ಕೆ ಕೋಳಿಗಳನ್ನು ಕೊಂಡೊಯ್ಯುವಾಗ ಪಂಚಾಗ ನೋಡುವುದು ಸಹಜ. ಅಮವಾಸ್ಯೆಯ ದಿವಸ ಬಿಳಿ, ಕಪ್ಪು ಮತ್ತು ಹುಣ್ಣಿಮೆ ದಿನ ಕೆಂಪು ಹೀಗೆ ಪ್ರತೀ ದಿನವೂ ಒಂದೊಂದು ರೀತಿಯ ಬಣ್ಣದ ಕೋಳಿಗಳು ವಿಜಯ ಸಾಧಿಸುತ್ತವೆ ಎನ್ನುವಂತಹ ನಂಬಿಕೆ ಜನರಲ್ಲಿದೆ.
ಕರಾವಳಿ ನಾಡಿನ ಪ್ರತೀ ಊರಿನಲ್ಲೂ ನಡೆಯುವಂತಹ ಈ ಕಾಳಗವನ್ನು ನೋಡಲು ಮುಂಬೈ ಸೇರಿದಂತೆ ಇನ್ನಿತರ ದೂರದ ಊರಿನ ಉದ್ಯಮಿಗಳು ಆಗಮಿಸುವುದು ಸಹಜವಾಗಿದೆ. ಕೇವಲ ಪುರುಷರಿಗಾಗಿಯೇ ಇರುವಂತಹ ಕ್ರೀಡೆಯಲ್ಲಿ ದಿನವೊಂದಕ್ಕೆ ಲಕ್ಷಗಟ್ಟಲೆ ಬೆಟ್ಟಿಂಗ್, ಜೂಜು ನಡೆಯುತ್ತದೆ. ಆದರೆ ಬೆಟ್ಟಿಂಗ್ ನಡೆಸಬಾರದು ಎಂಬುವ ನಿಯಮಗಳಿದ್ದರೂ ಅಧಿಕ ಪ್ರಮಾಣದಲ್ಲಿ ನಡೆಯುತ್ತದೆ ಎನ್ನುವುದು ವಿಷಾದನೀಯ ಸಂಗತಿ.

ಒಳ್ಳೆಯ ಆದಾಯ: ಕೆಲವರು ಹಣಗಳಿಸುವುದರಗೋಸ್ಕರವೇ ಅಂಕದ ಕೋಳಿಗಳನ್ನು ಸಾಕುತ್ತಾರೆ. ಸಾಮಾನ್ಯವಾಗಿ ಕೋಳಿಗಳು 250 ರೂ.ನಿಂದ 300 ರೂ.ಗೆ ಮಾರಾಟವಾದರೆ ದಷ್ಟ ಪುಷ್ಠವಾಗಿ ಬಲಿತ ಅಂಕದ ಹುಂಜಗಳು 1,000 ರೂ.ನಿಂದ 10,000ರೂ.ಗಳವರೆಗೆ ಮಾರಾಟವಾಗುತ್ತದೆ.


-ಸಂಗ್ರಹ 

ಚಹಾ, ಕಾಫಿ ಇವುಗಳ ದುಷ್ಪರಿಣಾಮಗಳು:




ಚಹಾ, ಕಾಫಿಗಳಲ್ಲಿ ಹತ್ತು ವಿಧದ ವಿಷಗಳಿರುತ್ತವೆ.
೧. ‘ಟ್ಯಾನಿನ್’ ಎಂಬ ವಿಷವು ಶೇ.೧೮ರಷ್ಟಿರುತ್ತದೆ. ಇದು ಹೊಟ್ಟೆಯಲ್ಲಿ ಛಿದ್ರಗಳನ್ನು ಮತ್ತು ವಾಯುವನ್ನು ನಿರ್ಮಾಣ ಮಾಡುತ್ತದೆ.
೨. ‘ಥಿನ್’ ಎಂಬ ವಿಷವು ಶೇ.೩ರಷ್ಟಿರುತ್ತದೆ. ಇದರಿಂದ ಹುಚ್ಚುತನ ಬರುತ್ತದೆ. ಹಾಗೆಯೇ ಈ ವಿಷವು ಶ್ವಾಸಕೋಶ (ಪುಪ್ಪುಸ) ಮತ್ತು ಮೆದುಳಿನಲ್ಲಿ ಜಡತ್ವವನ್ನು ನಿರ್ಮಿಸುತ್ತದೆ.
೩. ‘ಕೆಫಿನ್’ ಎಂಬ ವಿಷವು ಶೇ.೨.೭೫ರಷ್ಟಿರುತ್ತದೆ. ಇದರಿಂದ ಮೂತ್ರಪಿಂಡಗಳು ದುರ್ಬಲಗೊಳ್ಳುತ್ತವೆ.
೪. ‘ವ್ಯಾಲಾಟೈಲ್’ ಎಂಬ ವಿಷವು ಕರುಳಿನ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
೫. ‘ಕಾರ್ಬೋನಿಕ್ ಆಮ್ಲ’ದಿಂದ ಆಮ್ಲಪಿತ್ತ (ಆಸಿಡಿಟಿ) ಹೆಚ್ಚಾಗುತ್ತದೆ.
೬. ‘ಪ್ಯಾಮಿನ್’ನಿಂದ ಜೀರ್ಣಶಕ್ತಿಯು ದುರ್ಬಲವಾಗುತ್ತದೆ.
೭. ‘ಆರೋಮೋಲಿಕ್’ ಕರುಳಿನ ಮೇಲೆ ಹಾನಿಕಾರಕ ಪ್ರಭಾವವನ್ನು ಬೀರುತ್ತದೆ.
೮. ‘ಸಾಯನೋಜನ್’ವು ನಿದ್ರಾಹೀನತೆ ಮತ್ತು ಪಾರ್ಶ್ವವಾಯುವಿನಂತಹ ಭಯಾನಕ ರೋಗಗಳನ್ನು ಉಂಟುಮಾಡುತ್ತದೆ.
೯. ‘ಆಕ್ಸೆಲಿಕ್ ಆಮ್ಲ’ವು ಶರೀರಕ್ಕೆ ಅತ್ಯಂತ ಹಾನಿಕರವಾಗಿದೆ.
೧೦. ‘ಸ್ಟಿನಾಯಿಲ್’ವು ರಕ್ತವಿಕಾರ ಮತ್ತು ನಪುಂಸಕತೆಯನ್ನು ನಿರ್ಮಿಸುತ್ತದೆ. ಆದುದರಿಂದ ಚಹಾ ಅಥವಾ ಕಾಫಿಯನ್ನು ಎಂದಿಗೂ ಕುಡಿಯಬಾರದು.

ಚಹಾದ ಮಾಧ್ಯಮದಿಂದ ರಜ-ತಮಗಳನ್ನು ಹೆಚ್ಚಿಸಲು ಅಸುರೀ ಶಕ್ತಿಗಳ ಪ್ರಯತ್ನ!
ಅ. ಚಹಾ ಒಳ್ಳೆಯ ಪೇಯ ಆಗದೇ ಇದ್ದರೂ ಇತರ ಅಪ್ರತಿಮ ಪೇಯಗಳ ತುಲನೆಯಲ್ಲಿ ಚಹಾದ ಇಚ್ಛೆಯನ್ನು ಕಪ್ಪು ಶಕ್ತಿಯ ಆಧಾರದಲ್ಲಿ ನಿರ್ಮಿಸುವುದು ಮತ್ತು ವ್ಯಸನವನ್ನು ತಗಲಿಸಿ ಚಹಾ ಸಂಸ್ಕೃತಿಯನ್ನು ನಿರ್ಮಾಣ ಮಾಡುವುದು: ಮಾಂತ್ರಿಕರ ಯೋಜನೆಯು ಹೇಗಿರುತ್ತದೆ ಎಂಬುದಕ್ಕೆ ಚಹಾ ಒಂದು ಉತ್ತಮ ಉದಾಹರಣೆಯಾಗಿದೆ. ಚಹಾ ಭಾರತೀಯ ಪೇಯವಲ್ಲ. ಕಪ್ಪು ಶಕ್ತಿಯನ್ನು ತೆಗೆದುಕೊಂಡು ಬಂದ ಆಂಗ್ಲರು ಇಲ್ಲಿ ಚಹಾ ಸಂಸ್ಕೃತಿಯನ್ನು ತಂದರು, ಅದರ ಬೀಜವನ್ನು ಬಿತ್ತಿದರು ಮತ್ತು ನಮಗೆ ತಿಳಿಯದಂತೆ ಅದರ ಪ್ರಚಾರವನ್ನು ಮಾಡಿದರು. ಇತರ ಅಪ್ರತಿಮ ಪೇಯಗಳ ತುಲನೆಯಲ್ಲಿ ಚಹಾ ಒಂದು ಉತ್ತಮ ಪೇಯವಾಗದೇ ಇದ್ದರೂ, ಕಪ್ಪು ಶಕ್ತಿಯ ಆಧಾರದ ಮೇಲೆ ಚಹಾದ ಇಚ್ಛೆಯನ್ನು ಜನರ ಮನಸ್ಸಿನಲ್ಲಿ ನಿರ್ಮಿಸಲಾಯಿತು. ನಂತರ ನಮಗೆ ಅದರ ವ್ಯಸನವನ್ನು ತಗಲಿಸಲಾಯಿತು ಮತ್ತು ಚಹಾ ಸಂಸ್ಕೃತಿಯು ಭಾರತದಲ್ಲಿ ನಿರ್ಮಾಣವಾಯಿತು.
ಆ. ಪರಿಸ್ಥಿತಿಯನ್ನು ಬದಲಾಯಿಸುವುದು ಕಠಿಣವಾಗಿದ್ದು, ಅದು ಈಶ್ವರನ ಕೃಪೆ ಮತ್ತು ಅಧಿಷ್ಠಾನದಿಂದಲೇ ಸಾಧ್ಯವಾಗುವುದು: ಕೆಟ್ಟ ಶಕ್ತಿಗಳು ಯಾವುದಾದರೊಂದು ವಿಷಯದ ಆಯೋಜನೆಯನ್ನು ಎಷ್ಟು ವಿಚಾರಪೂರ್ವಕವಾಗಿ ಮಾಡುತ್ತವೆ ಎಂಬುದು ಮೇಲಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಅದರ ಪರಿಣಾಮ ಎಷ್ಟು ಮಹತ್ತರವಾಗಿರುತ್ತದೆ ಎಂದರೆ ಪರಿಸ್ಥಿತಿಯನ್ನು ಸಹಜವಾಗಿ ಬದಲಾಯಿಸುವುದೂ ಕಠಿಣವಾಗಿರುತ್ತದೆ.
-ಸಂಗ್ರಹ 

ದುಬೈಯ ಗ್ಲೋಬಲ್ ವಿಲೇಜ್ !

ಯು.ಎ.ಇ(ಅರಬ್‌ ಸಂಯುಕ್ತ ಸಂಸ್ಥಾನ ) ಅಂದರೇ ಹೆಚ್ಚಿನವರಿಗೆ ತಿಳಿಯದು.ದುಬೈ ಅಂದರೆ ಥಟ್ಟನೆ ಇವತ್ತು ಹುಟ್ಟಿದ ಮಗುವಿಗೂ ಸಹಾ ಗೋತ್ತಿರುತ್ತದೆ, ತೈಲ ನಿಕ್ಷೇಪ,ಬಿಸಿಲಬೇಗೆ...